ರಾಷ್ಟ್ರೀಯ

ಜಿಯೋದಿಂದ 2017 ಮಾರ್ಚ್ ವರೆಗೆ ಉಚಿತ ಕರೆ ವಿಸ್ತರಣೆ?

Pinterest LinkedIn Tumblr

jioಮುಂಬೈ: ರಿಲಯನ್ಸ್ ಜಿಯೋ ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿಯಿದ್ದು, ಡಿಸೆಂಬರ್ 31ಕ್ಕೆ ಅಂತ್ಯವಾಗಬೇಕಿದ್ದ ಉಚಿತ ಕರೆಗಳ ವೆಲ್ಕಂ ಆಫರ್ ಅನ್ನು ಮುಂಬರುವ ಮಾರ್ಚ್ 2017ರವರೆಗೂ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ.
ಉಚಿತ ಕರೆ ಹಾಗೂ ಅನಿಯಮಿತ ಉಚಿತ ಡಾಟಾ ಯೋಜನೆಯನ್ನು ಒಳಗೊಂಡಿರುವ ಜಿಯೋ ಸಿಮ್ ಕಾರ್ಡ್ ಗಾಗಿ ಗ್ರಾಹಕರ ಪರದಾಟ ಮುಂದುವರೆದಿರುವಂತೆಯೇ ಮತ್ತೊಂದಿಷ್ಟು ದಿನಗಳ ಕಾಲ ರಿಲಯನ್ಸ್ ಸಂಸ್ಥೆ ತನ್ನ ವೆಲ್ಕಂ ಆಫರ್ ಅನ್ನು ಮುಂದವರೆಸುವ ಕುರಿತು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಡಿಸೆಂಬರ್ 28ರಂದು ಸಂಸ್ಥೆ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.
ಕಳೆದ ಸೆಪ್ಟೆಂಬರ್ 4ರಂದು ಅಧಿಕೃತವಾಗಿ ಉದ್ಘಾಟಿಸಿದ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಡಿಸೆಂಬರ್ 31ರವರೆಗೆ ಈ ಉಚಿತ ಕರೆಗಳ ವೆಲ್ಕಂ ಸೇವೆಯನ್ನು ನೀಡುವುದಾಗಿ ಘೋಷಿಸಿದ್ದರು.

Comments are closed.