ರಾಷ್ಟ್ರೀಯ

ಡಿ.31ರಿಂದ ಗೋವಾ ಮೀನು, ತರಕಾರಿಗಳನ್ನು ಕೊಳ್ಳಲು ಮೊಬೈಲ್ ಬಟನ್ ಒತ್ತಿದರೆ ಸಾಕು

Pinterest LinkedIn Tumblr

social_icons_6_on_mobile_smartphone_0ಪಣಜಿ (ನ.27): ನೋಟ್ ನಿಷೇಧ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಮೊಬೈಲ್ ಮೂಲಕ ನಗದು ರಹಿತ ಪಾವತಿಗೆ ಒತ್ತು ನೀಡಲು ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ದೇಶದ ಮೊದಲ ರಾಜ್ಯವಾಗಿ ಗೋವಾ ಡಿ.31ರಿಂದ ನಗದು ರಹಿತ ಪಾವತಿ ರಾಜ್ಯವಾಗುತ್ತಿದೆ. ಗೋವಾದಲ್ಲಿ ಮೀನು, ತರಕಾರಿ ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಲು ಮೊಬೈಲ್ ಬಟನ್ ಒತ್ತಿದರೆ ಸಾಕು. ವ್ಯಾಪಾರ ಮಾಡಿ ಮುಗಿಸಬಹುದು.
ಕೈಯಲ್ಲಿ ಪರ್ಸ್ ಹಿಡಿದು, ಪಿಕ್ ಪಾಕೆಟರ್ಸ್‌ಗೆ ಹೆದರುವ ಅಗತ್ಯವೇ ಇನ್ನಿರುವುದಿಲ್ಲ. ವ್ಯಾಪಾರ ಮಾಡಿದ ಹಣ ನೇರವಾಗಿ ವ್ಯಾಪಾರಿಯ ಖಾತೆಗೇ ಜಮೆಯಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ನಗದು ರಹಿತ ವ್ಯಾಪಾರದ ಬಗ್ಗೆ ನಾಗರಿಕರು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳಲ್ಲಿ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಮಾಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ.

Comments are closed.