ರಾಷ್ಟ್ರೀಯ

ನೋಟು ನಿಷೇಧ: ಶಬರಿಮಲೆಯಲ್ಲಿ ಇ- ಹುಂಡಿ

Pinterest LinkedIn Tumblr

e-hundiಶಬರಿಮಲೆ: 500 ಹಾಗೂ 100 ರೂ. ನೋಟ್‍ಗಳನ್ನು ಬ್ಯಾನ್ ಮಾಡಿದ ನಂತರ ಒಂದು ಕಡೆ ಕೈಯಲ್ಲಿ ನಗದು ಇಲ್ಲದೆ ಜನ ಪರದಾಡ್ತಿದ್ರೆ, ಮತ್ತೊಂದೆಡೆ ದೇವಸ್ಥಾನಗಳ ಹುಂಡಿಗೆ ಕಂತೆ ಕಂತೆ ಹಣ ಬಂದು ಬೀಳುತ್ತಿದೆ. ಆದ್ರೆ ಶಬರಿಮಲೆಯಲ್ಲಿ ತಿರುವಂಕೂರು ದೇವಸ್ವಂ ಮಂಡಳಿ ಗುರುವಾರದಿಂದ ಇ- ಹುಂಡಿ ಅಥವಾ ಇ- ಕಾಣಿಕೆ ವ್ಯವಸ್ಥೆಯನ್ನ ಪರಿಚಯಿಸಿದೆ.

ತಿರುವಂಕೂರು ದೇವಸ್ವಂ ಮಂಡಳಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಧನಲಕ್ಷ್ಮೀ ಬ್ಯಾಂಕ್ ಈಗ ದೇವಸ್ಥಾನದಲ್ಲಿ ಸ್ವೈಪಿಂಗ್ ಮಷೀನ್ ಅಳವಡಿಸಿದೆ. ಅಯ್ಯಪ್ಪ ದೇವಸ್ಥಾನದ ಗರ್ಭಗುಡಿಯ ದಕ್ಷಿಣ ಭಾಗದಲ್ಲಿ ಸ್ವೈಪಿಂಗ್ ಮಷೀನ್ ಅಳವಡಿಸಲಾಗಿದ್ದು, ಭಕ್ತರು ಕಾರ್ಡ್ ಸ್ವೈಪ್ ಮಾಡಿ ಕಾಣಿಕೆಯನ್ನ ಅರ್ಪಿಸಬಹುದಾಗಿದೆ.

ಅಲಾಫುಜಾದ ಉಪ ಜಿಲ್ಲಾಧಿಕಾರಿ ಎಸ್. ಚಂದ್ರಶೇಖರ್ ಡಿಜಿಟಲ್ ಹುಂಡಿಯನ್ನ ಉದ್ಘಾಟನೆ ಮಾಡಿದ್ರು. ಭಕ್ತರು ತಾವು ಬಯಸಿದಷ್ಟು ಹಣವನ್ನ ಇ-ಹುಂಡಿಗೆ ವರ್ಗಾವಣೆ ಮಾಡಿ ಅದರ ರಸೀದಿಯನ್ನು ಪಕ್ಕದಲ್ಲಿಟ್ಟುವ ಮತ್ತೊಂದು ಹುಂಡಿಯಲ್ಲಿ ಹಾಕಬಹುದಾಗಿದೆ.

ಯಾವುದೇ ಬ್ಯಾಂಕ್‍ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಿಸಿ ಇ- ಹುಂಡಿಗೆ ಹಣ ವರ್ಗಾಯಿಸಬಹುದಾಗಿದೆ. ದೇವಸ್ಥಾನ ತೆರೆದಿದ್ದಾಗ ಮಾತ್ರ ಈ ವ್ಯವಸ್ಥೆ ಲಭ್ಯವಿರುತ್ತದೆ.

Comments are closed.