ರಾಷ್ಟ್ರೀಯ

ಚಿನ್ನದ ಮೇಲೆ ಮೋದಿ ಕಣ್ಣು

Pinterest LinkedIn Tumblr

goldನವದೆಹಲಿ(ನ.25): ಕಪ್ಪು ಹಣದ ಮೇಲೆ ಸಮರ ಸಾರಿರುವ ಪ್ರಧಾನಮಂತ್ರಿ ನರೇಂದ್ರಮೋದಿ, 500 ಮತ್ತು 1000 ಸಾವಿರ ರೂಪಾಯಿ ನೋಟುಗಳನ್ನ ರದ್ದು ಮಾಡಿದ್ಧಾರೆ. ಇದೀಗ, ಮನೆಗಳಲ್ಲಿ ಇಟ್ಟುಕೊಂಡಿರುವ ಬಂಗಾರದ ಮೇಲೆ ಮೋದಿ ಕಣ್ಣು ಬಿದ್ದಿದೆ. ನ್ಯೂಸ್ ರೈಸ್ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ, ಮನೆಯಲ್ಲಿಟ್ಟಿರುವ ಬಂಗಾರಕ್ಕೂ ನಿಬಂಧನೆ ಹೇರುವ ಸಾಧ್ಯತೆ ಇದೆ.
ವಿಶ್ವದಲ್ಲಿಯೇ ಬಂಗಾರ ಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ದೇಶದಲ್ಲಿ ವರ್ಷಕ್ಕೆ ಕೊಳ್ಳುವ ಮೂರನೇ ಒಂದರಷ್ಟು ಬಂಗಾರಕ್ಕೆ ಕಪ್ಪು ಹಣ ಬಳೆಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಜನರು ಅಡಗಿಸಿಟ್ಟಿರುವ ತೆರಿಗೆ ಕಟ್ಟದ ಹಣದಲ್ಲಿ ಈ ಬಂಗಾರ ಖರೀದಿಸುತ್ತಿದ್ದು, ಈ ಹಣಕ್ಕೆ ಅಕೌಂಟ್ಸ್ ಇಲ್ಲ ಎನ್ನಲಾಗಿದೆ.
ನೋಟುಗಳ ಬ್ಯಾನ್ ಬೆನ್ನಲ್ಲೇ ನಗದು ಮೂಲಕ ನಡೆಯುತ್ತಿದ್ದ ಗೋಲ್ಡ್ ಸ್ಮಗ್ಲಿಂಗ್ ಮೇಲೆ ಈಗಾಗಲೇ ಪರಿಣಾಮ ಬೀರಿದೆ. ಇದರ ಜೊತೆಗೆ ಮನೆಗಳಲ್ಲಿ ಇಟ್ಟುಕೊಂಡಿರುವ ಬಂಗಾರಕ್ಕೂ ಸರ್ಕಾರ ಹೊಸ ನಿಯಮಾವಳಿ ಜಾರಿಗೊಳಿಸುವ ಸಾಧ್ಯತೆ ಇದೆ.

Comments are closed.