ರಾಷ್ಟ್ರೀಯ

ಜನಧನ ಖಾತೆಗಳಲ್ಲಿ ₹64 ಸಾವಿರ ಕೋಟಿ ಜಮೆ

Pinterest LinkedIn Tumblr

jana-danನವದೆಹಲಿ: ಗರಿಷ್ಠ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಜನಧನ ಖಾತೆಗಳಲ್ಲಿ ಒಟ್ಟು ₹64,252.15 ಕೋಟಿ ಜಮೆಯಾಗಿದೆ. ಉತ್ತರ ಪ್ರದೇಶದಲ್ಲಿ ₹10,670,62 ಕೋಟಿ ಜಮೆಯಾಗಿದ್ದು, ಪಶ್ಚಿಮ ಬಂಗಾಳ, ರಾಜಸ್ತಾನ ನಂತರದ ಸ್ಥಾನದಲ್ಲಿವೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

ರಾಷ್ಟ್ರಾದ್ಯಂತ 25.58 ಕೋಟಿ ಪ್ರಧಾನಮಂತ್ರಿ ಜನಧನ ಖಾತೆಗಳಲ್ಲಿ ನ. 16ರವರೆಗೆ ₹64,252.15 ಕೋಟಿ ಜಮೆಯಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್‌ ಕುಮಾರ್‌ ಗಂಗವಾರ್‌ ಲೋಕಸಭೆಗೆ ಲಿಖಿತವಾಗಿ ತಿಳಿಸಿದರು.

ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದ್ದು, 3.79 ಕೋಟಿ ಜನಧನ ಖಾತೆಗಳಲ್ಲಿ ಅತಿ ಹೆಚ್ಚು ₹10,670.62 ಕೋಟಿ ಜಮೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ 2.44 ಕೋಟಿ ಜನಧನ ಖಾತೆಗಳಲ್ಲಿ ₹7,826.44 ಕೋಟಿ ಜಮೆಯಾಗಿದೆ.

ರಾಜಸ್ತಾನದ 1.89 ಕೋಟಿ ಜನಧನ ಖಾತೆಗಳಲ್ಲಿ ₹5,345.57 ಕೋಟಿ, ಬಿಹಾರದಲ್ಲಿ 2.62 ಕೋಟಿ ಜನಧನ ಖಾತೆಗಳಲ್ಲಿ ₹4,912.79 ಕೋಟಿ ಜಮೆಯಾಗಿದೆ ಎಂದು ಅವರು ವಿವರ ನೀಡಿದ್ದಾರೆ.

ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ರಾಜ್ಯ ಖಾತೆ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌, ನ.11ರವರೆಗೆ ₹17.87 ಲಕ್ಷ ಕೋಟಿ ಹಣ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು.

Comments are closed.