ರಾಷ್ಟ್ರೀಯ

30 ನಿಮಿಷದಲ್ಲಿ ಜಿಯೋ ಸಿಮ್ ಮನೆ ಬಾಗಿಲಿಗೆ…!

Pinterest LinkedIn Tumblr

jioಮುಂಬೈ: ಕೋಟ್ಯಾಂತರ ಗ್ರಾಹಕರನ್ನು ಕಡಿಮೆ ಅವಧಿಯಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ದಿಂದ ಹೊಸದೊಂದು ಸೇವೆ ಆರಂಭವಾಗಿದ್ದು, ಸಿಮ್ ಅವಶ್ಯಕತೆ ಇರುವವರು ಆನ್ ಲೈನ್ ನಲ್ಲಿ ಸಿಮ್ ಪಡೆಯಬಹುದಾಗಿದ್ದು, ಬುಕ್ ಮಾಡಿದ 30 ನಿಮಿಷದಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ.
ಸದ್ಯ ನೋಟು ಬದಲಾವಣೆಗೆ ಕ್ಯೂ ನಲ್ಲಿ ನಿಂತು ಸಾಕಾಗಿರುವರು ಜಿಯೋ ಸಿಮ್ ಗಾಗಿಯೂ ಸರದಿಯಲ್ಲಿ ನಿಲ್ಲಲು ಸಾಧ್ಯವಿಲ್ಲ ಎನ್ನುವವರು ಈ ಸೇವೆಯನ್ನು ಪಡೆಯ ಬಹುದಾಗಿದ್ದು, ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಜಿಯೋ ಈ ಸೇವೆಯನ್ನು ಆರಂಭಿಸಿದೆ ಎನ್ನಲಾಗಿದೆ .
ಈ ಹಿಂದೆಯೂ ಈ ಸೇವೆಯನ್ನು ಆರಂಭಿಸಲಾಗಿತ್ತಾದರು ಸರಿಯಾದ ಮಟ್ಟದಲ್ಲಿ ಜಾರಿಗೆ ತರಾಗಿರಲಿಲ್ಲ. ಸದ್ಯ ಮನೆ ಬಾಗಿಲಿಗೆ ಸಿಮ್ ನೀಡಲು ಜಿಯೋ ಮುಂದಾಗಿದೆ. ಆದರೆ ಇದು ಸ್ವತಂತ್ರ ಮನೆಗಳಿಗೆ ಈ ಸೇವೆ ಲಭ್ಯವಿಲ್ಲ ಬದಲಾಗಿ ಅಪರ್ಟ್ಮೆಂಟ್ ಇಲ್ಲವೇ ಹೌಸಿಂಗ್ ಸೋಸೈಟಿಗಳಿಗೆ ಈ ಸೇವೆ ಲಭ್ಯವಿದೆ.
ಜಿಯೋ ವೆಬ್ ಸೈಟಿನಲ್ಲಿ ‘ಜಿಯೋ ಅಟ್ ಯುವರ್ ದೋರ್ ಸ್ಟೇಪ್’ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಅಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿದರೆ ಜಿಯೋ ಸಿಮ್ ನೀವು ಇರುವ ಜಾಗಜ್ಜೆ ಬಂದು ಸೇರಲಿದೆ.

Comments are closed.