ರಾಷ್ಟ್ರೀಯ

ಬಿಲ್ಡರ್‌ ಬಳಿ ಇದ್ದ ನಿಷೇಧಿತ 500, 1000 ನೋಟಿನ 1.40 ಕೋಟಿ ವಶಕ್ಕೆ

Pinterest LinkedIn Tumblr

noteಅಹಮದಾಬಾದ್‌: ಇಲ್ಲಿನ ಅಂಬಾವಾಡಿಯ ಸ್ಥಳೀಯ ಬಿಲ್ಡರ್‌ ಬಳಿ ಇದ್ದ ನಿಷೇಧಿತ ₹500, 1,000 ಮುಖಬೆಲೆಯ ನೋಟುಗಳ ₹1.40 ಕೋಟಿಯನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದು, ಮೂವರನ್ನು ಬಂಧಿಸಿದ್ದಾರೆ.

ಬಿಲ್ಡರ್‌ ಹೇಮೇಂದರ್‌ ಷಾ ಅವರು ತಮ್ಮ ಬಳಿ ಇದ್ದ ನಿಷೇಧಿತ ನೋಟುಗಳನ್ನು ಬದಲಾವಣೆ ಮಾಡುವ ಪ್ರಯತ್ನದಲ್ಲಿದ್ದರು. ಪೊಲೀಸರು ಅವರ ಕಚೇರಿ ಮೇಲೆ ದಾಳಿ ನಡೆಸಿ ನಗದನ್ನು ವಶಕ್ಕೆ ಪಡೆದಿದೆ.

ಅಂಬಾವಾಡಿಯಲ್ಲಿನ ಆನಂದ ಬಿಲ್ಡರ್ಸ್‌ ಕಚೇರಿ ಮೇಲೆ ದಾಳಿ ನಡೆಸಿ, ನೋಟುಗಳನ್ನು ಬದಲಾವಣೆ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ನಿಷೇಧಿತ ₹500, 1,000 ಮುಖಬೆಲೆಯ ನೋಟುಗಳ ₹1.40 ಕೋಟಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಇನ್‌ಸ್ಪೆಕ್ಟರ್‌ ಬಿ.ಎಸ್‌. ರಬರಿ ತಿಳಿಸಿದ್ದಾರೆ.

ಈ ಸಂಬಂಧ ಷಾ ಹಾಗೂ ಇಬ್ಬರನ್ನು ಬಂಧಿಸಲಾಗಿದ್ದು, ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.