ಪ್ರಮುಖ ವರದಿಗಳು

ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಅನಂತ್ ಅಂಬಾನಿ: ದೇವಸ್ಥಾನಕ್ಕೆ 27 ಕೋಟಿ ಮೌಲ್ಯದ 25 ಎಲೆಕ್ಟ್ರಿಕ್ ಬಸ್ ದಾನ ನೀಡುವುದಾಗಿ ಘೋಷಣೆ!

Pinterest LinkedIn Tumblr

ಆಂದ್ರಪ್ರದೇಶ: ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ತಿಮ್ಮಪ್ಪನ ದರ್ಶನ ಪಡೆದು ದೇವಾಲಯ ಆಡಳಿತಕ್ಕಾಗಿ ಮಹತ್ವದ ಘೋಷಣೆ ಮಾಡಿದರು. ಸುಪ್ರಭಾತ ಸೇವೆಯಲ್ಲಿ ಭಾಗವಹಿಸಿದ್ದಲ್ಲದೆ, ಸಂಪ್ರದಾಯದಂತೆ ದೇವರಿಗೆ ತಮ್ಮ ಮುಡಿ(ಕೂದಲು) ಅರ್ಪಿಸಿದರು.

ದರ್ಶನದ ನಂತರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸುಮಾರು 27.5 ಕೋಟಿ ಮೌಲ್ಯದ 25 ಎಲೆಕ್ಟ್ರಿಕ್ ಬಸ್‌ಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿದರು. ಈ ನಿರ್ಧಾರವನ್ನು ಭಕ್ತಿಯ ಕಾರ್ಯ ಮತ್ತು ಪರಿಸರ ಸಂರಕ್ಷಣೆಯತ್ತ ಒಂದು ಪ್ರಮುಖ ಹೆಜ್ಜೆ ಎಂದು ಬಣ್ಣಿಸಲಾಗಿದೆ.

ವೇದ ವಿದ್ವಾಂಸರು ದೇವಸ್ಥಾನದ ಆವರಣದಲ್ಲಿ ಅನಂತ್ ಅಂಬಾನಿ ಅವರಿಗೆ ವೇದಾಶೀರ್ವಚನ ನೀಡಿದರು. ದೇವಸ್ಥಾನ ಆಡಳಿತವು ಅವರಿಗೆ ಶ್ರೀವಾರಿ ತೀರ್ಥ ಪ್ರಸಾದ ಮತ್ತು ಸಾಂಪ್ರದಾಯಿಕ ರೇಷ್ಮೆ ಶಾಲು ಹೊದಿಸಿ ಸನ್ಮಾನಿಸಿತು. ರಿಲಯನ್ಸ್ ಇಂಡಸ್ಟ್ರೀಸ್ ಬಸ್‌ಗಳನ್ನು ಒದಗಿಸುವುದಲ್ಲದೆ, ಅವುಗಳನ್ನು ನಿರ್ವಹಿಸಲು ಅಗತ್ಯವಿರುವ 50 ಚಾಲಕರ ಸಂಬಳ ಮತ್ತು ಇತರ ವೆಚ್ಚಗಳನ್ನು ಸಹ ಭರಿಸುತ್ತದೆ ಎಂದು ಅವರು ಹೇಳಿದರು. ವಿದ್ಯುತ್ ಬಸ್‌ಗಳನ್ನು ನಿರ್ವಹಿಸಲು ತಿರುಮಲದಲ್ಲಿ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬೆಂಬಲ ನೀಡುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು.

Comments are closed.