ರಾಷ್ಟ್ರೀಯ

500 ಮತ್ತು 1000 ರೂ.ನ ಹಳೆ ನೋಟು ಇರುವವರು ಅದಷ್ಟು ಬೇಗ ಬದಲಾಯಿಸಿಕೊಳ್ಳಿ…ಯಾಕೆಂದರೆ?

Pinterest LinkedIn Tumblr

noteನವದೆಹಲಿ(ನ.22): ಭಾರತ ಸರ್ಕಾರ ನೋಟು ನಿಷೇಧಿಸಿದ ಬಳಿಕ ಈವರೆಗೆ ಹಲವಾರು ಮಹತ್ತರವಾದ ಬದಲಾವಣೆಗಳಾಗಿವೆ. ಪ್ರಧಾನಿ ಮೋದಿ ನವೆಂಬರ್ 8ರಂದು 500 ಹಾಗೂ 1000 ರೂಪಾಯಿ ನೋಟು ಬ್ಯಾನ್ ಕುರಿತು ಘೋಷಣೆ ಮಾಡಿದ್ದು, ಡಿಸೆಂಬರ್ 31ರವರೆಗೆ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳುವ ಇಲ್ಲವೇ ಖಾತೆಗೆ ಜಮಾ ಮಾಡಲು ಸಮಯಾವಕಾಶ ನೀಡಿದ್ದರು. ಈ ನಿರ್ಧಾರದ ಮರುದಿನದಿಂದಲೇ ಬ್ಯಾಂಕ್’ಗಳೆದುರು ಜನರು ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಮೋದಿ ಸರ್ಕಾರ ನೋಟು ಬ್ಯಾನ್ ಕುರಿತಾಗಿ ಘೋಷಣೆ ಮಾಡಿದ್ದಾರೇನೋ ಸರಿ. ಆದರೆ ಈ ಘೋಷಣೆ ಬಳಿಕ ನೋಟ್ ಬದಲಾವಣೆ ವಿಚಾರದಲ್ಲಿ ಹಲವಾರು ಬದಲಾವಣೆಗಳನ್ನೂ ತಂದಿದೆ. ಮೊದಲು ನೋಟು ವಿನಿಮಯ ಮಾಡಿಕೊಳ್ಳುವ ಮಿತಿ 4000 ರೂಪಾಯಿಗೆ ನಿಗದಿಪಡಿಸಿದ್ದು, ಬಳಿಕ ಇದನ್ನು 45000 ರೂಪಾಯಿಗೆ ಏರಿಸಿದ್ದರು. ಆದರೆ ಗುರುವಾರದಿಂದ ಮತ್ತೆ ಈ ಮಿತಿಯನ್ನು 2000 ರೂಪಾಯಿಗೆ ಇಳಿಸಿದ್ದಾರೆ. ಇನ್ನು ಇದೇ ವಿಚಾರವಾಗಿ ಬ್ಯಾಂಕ್’ನಲ್ಲಿ ಜನಜಂಗುಳಿ ಹೆಚ್ಚಾಗಬಾರದೆಂಬ ಉದ್ದೇಶದಿಂದ ಸಚಿವ ಶಕ್ತಿಕಾಂತ್ ದಾಸ್ ಬ್ಯಾಂಕ್ ಅಕೌಂಟ್’ಗೆ ಹಳೆ ನೋಟು ಜಮಾವಣೆ ಮಾಡಲು ಬರುವ ಗ್ರಾಹಕರ ಕೈ ಬೆರಳಿಗೆ ನೀಲಿ ಶಾಯಿ ಹಚ್ಚುವಂತೆ ಸೂಚನೆಯನ್ನೂ ಹೊರಡಿಸಿದ್ದರು.
ಆದರೆ NDTV ವರದಿಯನ್ವಯ ‘ಸರ್ಕಾರ ಸದ್ಯದಲ್ಲೇ(ನಿಗದಿತ ಅವಧಿಗಿಂತ ಮೊದಲೇ) ನೋಟು ವಿನಿಮಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಕುರಿತಾಗಿ ಯೋಚನೆ ಮಾಡುತ್ತಿದೆ. ಈ ನಿರ್ಧಾರವನ್ನು ಜಾರಿಗೊಳಿಸಿದರೆ ಯಾರೇ ಆಗಲಿ 500 ಹಾಗೂ 1000 ರೂಪಾಯಿಯ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ’ ಒಂದು ತಿಳಿಸಿದೆ. ಇಂತಹ ನಿರ್ಧಾರವೊಂದು ಜಾರಿಗೊಳಿಸಿದ್ದೇ ಆದಲ್ಲಿ ಕೇವಲ ಬ್ಯಾಂಕ್ ಖಾತೆ ಹೊಂದಿರುವವರಷ್ಟೇ ತಮ್ಮ ಖಾತೆಗೆ ಹಣ ಜಮಾಯಿಸಿಕೊಳ್ಳಬಹುದು ಹಾಗೂ ಕೇವಲ ಚೆಕ್ ಇಲ್ಲವೇ ATM ಮೂಲಕ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು. ಇದರಿಂದ ಬ್ಯಾಂಕ್ ಸಿಬ್ಬಂದಿಗಳ ಮೇಲಿನ ಕೆಲಸದ ಒತ್ತಡವೂ ಕಡಿಮೆಯಾಗಲಿದೆ.
ಕೇವಲ ATM ಸ್ಥಿತಿಯಲ್ಲಿ ಸುಧಾರಣೆಯಾದರಷ್ಟೇ ಇಂತಹ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಜನರು ಇನ್ನಷ್ಟು ಕಷ್ಟ ಎದುರಿಸಬೇಕಾತ್ತದೆ. ಸರ್ಕಾರದಿಂದ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಕೃಪೆ: NDTV

Comments are closed.