ರಾಷ್ಟ್ರೀಯ

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಅತ್ಯಾಚಾರ: ಆರೋಪಿಯ ಬಂಧನ

Pinterest LinkedIn Tumblr

rape-2ನವದೆಹಲಿ: ಶಾಹ್‌ದರಾ ಹಾಗೂ ಓಲ್ಡ್ ದೆಹಲಿ ನಿಲ್ದಾಣ ಮಧ್ಯೆ ಚಲಿಸುತ್ತಿದ್ದ ರೈಲಿನಲ್ಲಿ 32 ರ ಹರೆಯದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗದ ಘಟನೆ ನಡೆದಿದೆ.

ಮಹಿಳಾ ಬೋಗಿಯಲ್ಲಿ ಐವರು ಮಹಿಳೆಯರು ಪ್ರಯಾಣಿಸುತ್ತಿದ್ದರು. ಈ ಪೈಕಿ ನಾಲ್ವರು ಶಾಹ್‌ದರಾ ರೈಲ್ವೆ ಸ್ಟೇಷನ್‌ನಲ್ಲಿ ಇಳಿದಿದ್ದರಿಂದ ಅತ್ಯಾಚಾರಕ್ಕೊಳಗಾದ ಮಹಿಳೆ ಏಕಾಂಗಿಯಾಗಿದ್ದಳು. ಇದೇ ರೈಲ್ವೆ ಸ್ಟೇಷನ್‌ನಲ್ಲಿ ಹತ್ತಿದ ಮೂವರಲ್ಲಿ ಇಬ್ಬರು ಏಕಾಂಗಿ ಮಹಿಳೆಯ ಬ್ಯಾಗ್ ಕದ್ದು ಪರಾರಿಯಾದರೆ, ಮತ್ತೋರ್ವ ಮಹಿಳೆಯ ಮೇಲೆ ಹಲ್ಲೆ ನಡೆಸಿ, ರೇಪ್ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಠಾತ್ ಆಗಿ, ಇಬ್ಬರು ಪೇದೆಗಳು ಕೂಡ ಇದೇ ಬೋಗಿಗೆ ಬಂದಿದ್ದರಿಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಕಂಡು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈತನನ್ನು ಶಹಬಾಜ್ (25) ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಬಿಹಾರ ಮೂಲದವಳಾಗಿದ್ದು, ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುತ್ತಿದ್ದಳು ಎಂದು ಮೂಲಗಳು ತಿಳಿಸಿವೆ.

Comments are closed.