ಅಂತರಾಷ್ಟ್ರೀಯ

ಟ್ರಂಪ್ ಗೆಲುವಿನ ಹಿಂದೆ ಫೇಸ್ ಬುಕ್’!

Pinterest LinkedIn Tumblr

donald-trumpನ್ಯೂಯಾರ್ಕ್(ನ.20): ಡೊನಾಲ್ಡ್ ಟ್ರಂಪ್ ಗೆಲುವಿಗೆ ಫೇಸ್ ಬುಕ್ ನ ಸುಳ್ ಸುದ್ದಿಗಳು ನೆರವಾಗಿವೆ ಎಂದು ಬರಾಕ್ ಒಬಾಮ ಆರೋಪ ಮಾಡಿದ್ದರು.
ಈ ಬೆನ್ನಲ್ಲೇ ಫೇಸ್ ಬುಕ್ ನ ಸಿಇಒ ಮಾರ್ಕ್ ಜುಕರ್ ಬರ್ಗ್ ಸಾಮಾಜಿಕ ಜಾಲತಾಣದಲ್ಲಿ ಸುಳ್ ಸುದ್ದಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಸುಳ್ ಸುದ್ದಿಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿರುವ ಜುಕರ್ ಬರ್ಗ್ , ಜನರು ನಿಖರ ಸುದ್ದಿಯನ್ನು ಬಯಸುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ ಸುದ್ದಿ ಹಬ್ಬುವುದನ್ನು ತಡೆಗಟ್ಟಲು ನಾವು ಯತ್ನಿಸುತ್ತಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ್ದಾರೆ.
ಯಾವುದು ಸುಳ್ ಸುದ್ದಿ ಯಾವುದು ಸುಳ್ ಸುದ್ದಿಯಲ್ಲ ಎಂಬುದನ್ನು ಜನರಿಗೆ ತಿಳಿಸಲು ಫೇಸ್ ಬುಕ್ ಸಂಸ್ಥೆ ನಿರಂತರವಾಗಿ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

Comments are closed.