ರಾಷ್ಟ್ರೀಯ

ಬ್ಯಾಂಕಿನಲ್ಲಿ ಅಧಿಕ ಹಣ ಜಮೆ ಮಾಡಿದವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್

Pinterest LinkedIn Tumblr

income-taxclrನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಬ್ಯಾಂಕ್ ಗಳ ಖಾತೆಗೆ ಭಾರಿ ಮೊತ್ತದ ನಗದು ಜಮೆ ಮಾಡುತ್ತಿರುವ ನೂರಾರು ಮಂದಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಆದಾಯ ತೆರಿಗೆ ಇಲಾಖೆ, ದೇಶಾದ್ಯಂತ ಹಲವು ಮಂದಿಗೆ ನೋಟಿಸ್ ನೀಡಿದ್ದು, ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಖಾತೆಗಳಿಗೆ 2.5 ಲಕ್ಷಕ್ಕಿಂತ ಹೆಚ್ಚು ಹಣ ಜಮೆ ಮಾಡುತ್ತಿರುವ ಅನುನಾಸ್ಪದ ಕೆಲವು ವ್ಯಕ್ತಿಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ ನಂತರ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 8ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಪ್ಪುಹಣ, ಭ್ರಷ್ಟಾಚಾರ ಹಾಗೂ ನಕಲಿ ನೋಟ್ ಗಳ ಹಾವಳಿ ತಡೆಯುವುದಕ್ಕಾಗಿ 500 ಹಾಗೂ 1000 ನೋಟ್ ನಿಷೇಧಿಸುವುದಾಗಿ ಘೋಷಿಸಿದ್ದರು.

Comments are closed.