ಬೆಂಗಳೂರು: ಐನೂರು ಸಾವಿರ ರೂಪಾಯಿಯ ನೋಟ್ ಬ್ಯಾನ್ ಎಫೆಕ್ಟ್ ಸಿನಿಮಾಗಳ ಮೇಲೆ ದೊಡ್ಡ ಮಟ್ಟಿಗೆ ಪರಿಣಾಮ ಬೀರುತ್ತಿದೆ. ವೀಕೆಂಡ್ ಬಂದ್ರೆ ಸಾಕು ಜನಗಳಿಂದ ತುಂಬಿತುಳುಕುತ್ತಿದ್ದ ಚಿತ್ರಮಂದಿರಗಳು ಇದೀಗ ಬಿಕೋ ಅನ್ನುತ್ತಿದೆ.
ಹೌದು. ಐನೂರು, ಸಾವಿರ ರೂಪಾಯಿ ಬ್ಯಾನ್ ಹೊಡೆತದಿಂದ ಚಿತ್ರರಂಗವೂ ನಲುಗಿ ಹೋಗ್ತಿದೆ. ಜನ ನೋಟ್ ಎಕ್ಸಚೇಂಜ್ನಲ್ಲಿ ಬ್ಯುಸಿಯಾಗಿರೋದ್ರಿಂದ, ಥಿಯೇಟರ್ ಕಡೆ ಯಾರು ಮುಖವನ್ನೇ ಮಾಡ್ತಿಲ್ಲ. ಇದ್ರಿಂದಾಗಿ ಸಿಂಗಲ್ಸ್ಕ್ರೀನ್ ಥಿಯೇಟರ್ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿದೆ. ಮಲ್ಟಿಫ್ಲೆಕ್ಸ್ಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ.
ಚಿಲ್ಲರೆ ಸಮಸ್ಯೆಯಿಂದ ಜನ ಕಂಗೆಟ್ಟಿದ್ದು ಸಿನಿಮಾ ನೋಡಲು ಹಿಂದೇಟು ಹಾಕ್ತಿದ್ದಾರೆ. ಧನಂಜಯ್ ಅಭಿನಯದ ಬದ್ಮಾಶ್ ಚಿತ್ರಗಳ ಕಲೆಕ್ಷನ್ ಕೂಡಾ ಅಂದುಕೊಂಡಷ್ಟು ಗಳಿಕೆ ಕಂಡಿಲ್ಲ.
ಇನ್ನು ಶೂಟಿಂಗ್ ಹಂತದಲ್ಲಿರೋ ಕೆಲ ಸಿನಿಮಾಗಳೂ ಚಿತ್ರೀಕರಣ ಅರ್ಧಕ್ಕೇ ನಿಲ್ಲಿಸಿವೆ. ರಿಲೀಸ್ ಆಗೋಕೆ ಕಾಯ್ತಿರೋ ಸಿನಿಮಾಗಳು ತಡವರಿಸ್ತಿವೆ.
Comments are closed.