ರಾಷ್ಟ್ರೀಯ

ನಿಷೇಧಿಸಲ್ಪಟ್ಟ ನೋಟುಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1.26 ಲಕ್ಷ ಕೋಟಿ

Pinterest LinkedIn Tumblr

noteಮುಂಬೈ: ₹500 ಮತ್ತು ₹1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ನಂತರದ ಈ ಎಂಟು ದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹1.26 ಲಕ್ಷ ಕೋಟಿ ನಗದು ಜಮೆ ಆಗಿದೆ.

ನವೆಂಬರ್ 10 ರಿಂದ 17ರ ವರೆಗಿನ ಅವಧಿಯಲ್ಲಿ ಇಷ್ಟೊಂದು ಮೊತ್ತ ಬ್ಯಾಂಕ್‍ನಲ್ಲಿ ಜಮೆ ಆಗಿದೆ.

ನೋಟು ಬದಲಾವಣೆಗಾಗಿ ಜನರು ಹಣವನ್ನು ಬ್ಯಾಂಕ್‍ಗಳಲ್ಲಿ ಜಮೆ ಮಾಡಿದ್ದು, ಜಮೆಯಾದ ಎಲ್ಲ ನೋಟುಗಳು ₹500 ಮತ್ತು ₹1000 ಮುಖಬೆಲೆಯ ನೋಟುಗಳಾಗಿವೆ.

ಹೂಡಿಕೆಯ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಈ ವಾರ ಎಸ್‍ಬಿಐ ಸ್ಥಿರ ಠೇವಣಿ ದರದಲ್ಲಿ 50ರವರೆಗೆ ಮೂಲಾಂಕವನ್ನು ಕಡಿತ ಮಾಡಿದೆ. ಠೇವಣಿಯ ಅವಧಿ ಮತ್ತು ಠೇವಣಿಯ ಸ್ವರೂಪಕ್ಕೆ ಅನುಗುಣವಾಗಿ ಈ ಮೂಲಾಂಕ ಕಡಿತಗೊಳಿಸಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಪ್ರಸ್ತುತ ಬ್ಯಾಂಕ್ ಸಾಲದ ದರವನ್ನೂ ಇಳಿಸುವ ಸೂಚನೆ ನೀಡಿದೆ.

ಹೂಡಿಕೆಯ ಪ್ರಮಾಣಕ್ಕನುಗುಣವಾಗಿ, ಡಿಸೆಂಬರ್ 1 ರಿಂದ ಸಾಲದ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಎಸ್‍ಬಿಐ ಮ್ಯಾನೇಜಿಂಗ್ ಡೈರೆಕ್ಟರ್ ರಜನೀಶ್ ಕುಮಾರ್ ಹೇಳಿದ್ದಾರೆ.

ಏತನ್ಮಧ್ಯೆ, ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲೊಂದಾದ ಆಕ್ಸಿಸ್ ಬ್ಯಾಂಕ್ ಈಗಾಗಲೇ ಸಾಲದ ದರ ಕಡಿತಗೊಳಿಸಿರುವುದಾಗಿ ಘೋಷಿಸಿದೆ.

Comments are closed.