ರಾಷ್ಟ್ರೀಯ

ಆನ್ ಲೈನ್’ನಲ್ಲಿ ಸೇಲಿಗಿದೆ 2000 ರೂ ನೋಟು…!

Pinterest LinkedIn Tumblr

2000-noteದೆಹಲಿ(ನ.17): ದೇಶದಲ್ಲಿ ನೋಟು ಬದಲಾವಣೆ ಮಾಡಿಕೊಳ್ಳಲು ಬ್ಯಾಂಕಿನಲ್ಲಿ ಉದ್ದೂದ್ದ ಕ್ಯೂ ನಿಂತುಕೊಳ್ಳಲು ಪರದಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಆನ್ ಲೈನ್ ಶಾಪಿಂಗ್ ಸೈಟ್ ಈಬೇ ತನ್ನ ವೆಬ್ ನಲ್ಲಿ 2000 ರೂ ನೋಟನ್ನು ಮಾರಾಟಕ್ಕೆ ಇಟ್ಟಿದೆ.
ಬುಧವಾರದಿಂದ 2000 ರೂ ಮುಖಬೆಲೆಯ ನೋಟನ್ನು ಆನ್ ಲೈನಲ್ಲಿ ಮಾರಾಟಕ್ಕೆ ಇಟ್ಟಿರುವ ಈಬೇ, ಒಂದು ನೋಟಿಗೆ ಆರಂಭಿಕ ಬೆಲೆಯಾಗಿ 3,500 ರೂಗಳನ್ನು ನಿಗಧಿಪಡಿಸಿದೆ. ನೀವು ನೋಟು ಪಡೆಯಬೇಕಾದರೆ ಆನ್ ಲೈನ್ ಮೂಲಕ ಇಲ್ಲವೇ ಕ್ರೆಡಿಟ್ ಕಾರ್ಡಿನಿಂದ ಹಣ ಪಾವತಿ ಮಾಡಬೇಕು.
ಅಲ್ಲದೇ ಮತ್ತೊಂದು ಆಯ್ಕೆಯ ಅವಕಾಶವನ್ನು ನೀಡಿರುವ ಈಬೇ, ಸಿರಿಯಲ್ ಅಥವಾ ನಿಮ್ಮ ಲಕ್ಕಿ ನಂಬರ್ ಇರುವ ನೋಟು ಬೇಕು ಎಂದರೆ ನೀವು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿದೆ. ಅದರಲ್ಲಿಯೂ ಧಾರ್ಮಿಕವಾಗಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿರುವ 798 ನಂಬರ್ ಹೊಂದಿರುವ ನೋಟಿಗೆ 1.51 ಲಕ್ಷ ರೂ. ನಿಗಧಿ ಮಾಡಿದೆ.
ಈ ಕುರಿತು ಮಾತನಾಡಿರುವ ಈಬೇ ಮುಖ್ಯಸ್ಥರು, ಇಂದೊದು ಸ್ವತಂತ್ರ ಮಾರುಕಟ್ಟೆಯಾಗಿದ್ದು, ಇಲ್ಲಿ ಮಾರಾಟಗಾರರ ಮೇಲೆ ಮತ್ತು ಮಾರಾಟವಾಗುವ ವಸ್ತುಗಳ ಮೇಲೆ ನಮ್ಮ ನಿಯಂತ್ರಣ ವಿರುವುದಿಲ್ಲ ಎಂದಿದ್ದಾರೆ. ಈ ಹಿಂದೆಯೂ ಈಬೇ ನಲ್ಲಿ ಲಕ್ಕಿ ನಂಬರ್ ನೋಟುಗಳ ವ್ಯಾಪರ ಜೋರಾಗಿಯೇ ನಡೆದಿತ್ತು.

Comments are closed.