ರಾಷ್ಟ್ರೀಯ

ಇಂದಿನಿಂದ ಎಟಿಎಂಗಳಲ್ಲಿ ₹2000 ನೋಟು ಲಭ್ಯ

Pinterest LinkedIn Tumblr

atm-finalನವದೆಹಲಿ: ನಾಳೆಯಿಂದ ₹2000 ಮುಖಬೆಲೆಯ ಹೊಸ ನೋಟುಗಳು ಎಟಿಎಂಗಳಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗಿದ್ದರೂ ಮುಂದಿನ ಹತ್ತು ದಿನಗಳ ಕಾಲ ಸರ್ಕಾರಿ ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಮ್, ಪೆಟ್ರೋಲ್ ಸ್ಟೇಷನ್ ಮತ್ತು ಬಿಲ್ ಪಾವತಿಗಾಗಿ ಈ ನೋಟುಗಳನ್ನು ಸ್ವೀಕರಿಸಲಾಗುವುದು.

ಈ ಬಗ್ಗೆ ಮಾತನಾಡಿದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ಅಂಚೆ ಕಚೇರಿಗಳಿಗೆ ಹೆಚ್ಚಿನ ನೋಟುಗಳನ್ನು ರವಾನೆ ಮಾಡಲಾಗಿದ್ದು, ಎಟಿಎಂಗಳಲ್ಲಿ ಹೊಸ ₹2000 ನೋಟು ವಿತ್‍ಡ್ರಾ ಮಾಡಲು ಸಾಧ್ಯವಾಗುವಂತೆ ಮಾಡಲು ವಿಶೇಷ ತಂಡ ಕಾರ್ಯ ನಿರತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಎಟಿಎಂ ಗೊಂದಲಕ್ಕೆ ಕಾರಣಗಳೇನು?
ಎಟಿಎಂನಿಂದ ಒಂದು ದಿನದಲ್ಲಿ ವಿತ್‍ಡ್ರಾ ಮಾಡಬಹುದಾದ ಹಣದ ಮಿತಿಯನ್ನು ಭಾನುವಾರ ₹2000 ದಿಂದ ₹2500ಕ್ಕೆ ಏರಿಸಿದ್ದು ಮಾತ್ರವಲ್ಲದೆ ಬ್ಯಾಂಕ್‍ಗಳಲ್ಲಿ ನೋಟು ಬದಲಾವಣೆಯ ಮಿತಿ ದಿನಕ್ಕೆ ₹4000 ದಿಂದ ₹4500 ಆಗಿ ಏರಿಕೆ ಮಾಡಲಾಗಿದೆ.

ದೇಶದಾದ್ಯಂತ ಎಟಿಎಂಗಳಲ್ಲಿ ಹೊಸ ಮೈಕ್ರೋ ಕ್ಯಾಶ್ ಮೆಷೀನ್‍ಗಳನ್ನು ಸ್ಥಾಪಿಸಲಾಗಿದೆ ಎಂದು ದಾಸ್ ಹೇಳಿದ್ದಾರೆ.

Comments are closed.