ರಾಷ್ಟ್ರೀಯ

₹2000 ನೋಟನ್ನು ನೀರಿನಲ್ಲಿ ತೊಳೆದರೆ ಏನಾಗುತ್ತದೆ?

Pinterest LinkedIn Tumblr

notetst-2000-fiನವದೆಹಲಿ: ₹2000 ಮುಖಬೆಲೆಯ ಹೊಸ ನೋಟು ಹೇಗಿದೆ? ಎಂಬುದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದರೆ ಇಲ್ಲೊಬ್ಬ ವ್ಯಕ್ತಿ ಹೊಸ ನೋಟನ್ನು ನೀರಿನಲ್ಲಿ ತೊಳೆದು ಪರೀಕ್ಷೆಗೊಳಪಡಿಸಿದ್ದಾನೆ.

ಸಾಮಾನ್ಯವಾಗಿ ಹೊಸ ಐಫೋನ್‍ಗಳು ಮಾರುಕಟ್ಟೆಗೆ ಬಂದಾಗ ಫೋನ್‍‍ನ್ನು ನೀರಿನಲ್ಲಿ ತೊಳೆದು ಟೆಸ್ಟಿಂಗ್ ಮಾಡುವ ವಿಡಿಯೊಗಳು ಕಾಣಸಿಗುತ್ತವೆ. ಆದರೆ ಇಲ್ಲಿ ₹2000 ಹೊಸ ನೋಟನ್ನು ನೀರಿನಲ್ಲಿ ತೊಳೆದು ಪರೀಕ್ಷೆ ಮಾಡಲಾಗಿದೆ.

ನೀರಿನಲ್ಲಿ ನೋಟು ತೊಳೆಯುತ್ತಿರುವ ವಿಡಿಯೊವನ್ನು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ಈ ವಿಡಿಯೊ ಸಂಚಲನ ಸೃಷ್ಟಿಸಿದೆ. ₹2000 ಮುಖಬೆಲೆಯ ನೋಟು ಮಾರುಕಟ್ಟೆಗೆ ಬರುವ ಮುನ್ನ ನೋಟಿನಲ್ಲಿ ಚಿಪ್ ಅಳವಡಿಸಲಾಗಿದೆ ಎಂಬ ವದಂತಿ ಹಬ್ಬಿತ್ತು.

ನೋಟಿನಲ್ಲಿ ಚಿಪ್ ಇದೆಯೇ? ಎಂದು ಪರೀಕ್ಷಿಸಿ ಕೆಲವರು ನೋಟನ್ನು ಹರಿದು ನೋಡಿದ ಘಟನೆಯೂ ಸುದ್ದಿಯಾಗಿತ್ತು.

ಇದೀಗ ನೋಟನ್ನು ಒಂದೇ ಸಮನೆ ನೀರಿನಲ್ಲಿ ತೊಳೆಯುತ್ತಾ, ನೋಟು ಏನೂ ಆಗಲ್ಲ ಎಂದು ಪರೀಕ್ಷೆ ನಡೆಸಿ ತೋರಿಸಿದ ವಿಡಿಯೊ ಸುದ್ದಿಯಾಗುತ್ತಿದೆ.

Comments are closed.