ಮುಂಬೈ (ನ.12); ದೇಶದಲ್ಲಿ 500, 1000 ರೂಪಾಯಿ ನೋಟುಗಳು ಚಲಾವಣೆ ರದ್ದಾದ ಹಿನ್ನೆಲೆಯಲ್ಲಿ ಹಲವರು ಬಚ್ಚಿಟ್ಟ ಅಪಾರ ಹಣ ಕಪ್ಪುಹಣ ನಿರುಪಯುಕ್ತವಾಗುತ್ತಿದೆ. ಹೀಗಾಗಿ ಕೆಲವರು ಆ ಹಣವನ್ನು ಸುಡುವ, ಬೀಸಾಡುವ ಕೆಲಸ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಯಾಂಡಲ್’ವುಡ್ ಹಾಗೂ ಬಾಲಿವುಡ್ ನಟಿ ಪೂಜಾ ಹೆಗ್ಡೆ ಪ್ರಧಾನಿ ಮೋದಿಯವರಿಗೆ ಒಂದು ಸಲಹೆ ನೀಡಿದ್ದಾರೆ.
500, 1000 ರೂಪಾಯಿ ನೋಟುಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಡೋನೇಷನ್ ಆಗಿ ನೀಡಲು 2017ರ ಮಾರ್ಚ್ಗೆ ಅವಕಾಶ ಕಲ್ಪಿಸಬೇಕು ಎಂದು ಪೂಜಾ ಹೆಗ್ಡೆ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಆಗ ಕಪ್ಪುಹಣವುಳ್ಳವರು ನೋಟಿನ ಕಂತೆಯನ್ನು ನಿರುಪಯುಕ್ತವಾಗಿ ಬೀಸಾಡುವ ಬದಲಿಗೆ ಆಸ್ಪತ್ರೆಗಳಿಗೆ ದಾನ ಮಾಡುವ ಸಾಧ್ಯತೆ ಇದೆ. ಅದರಿಂದ ಆರೋಗ್ಯ ಭದ್ರತೆ ಹೆಚ್ಚುತ್ತೆ ಎಂದು ಪೂಜಾ ಹೆಗ್ಡೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
ಮನೋರಂಜನೆ
Comments are closed.