ರಾಷ್ಟ್ರೀಯ

6000 ಕೋಟಿ ಹಣದೊಂದಿಗೆ ಸರ್ಕಾರಕ್ಕೆ ಶರಣಾದ ಉದ್ಯಮಿ?

Pinterest LinkedIn Tumblr

money-1

ಜೈಪುರ: ದೇಶದಲ್ಲೇ ಅತ್ಯಂತ ಶ್ರೀಮಂತ ಆಭರಣಗಳ ಉದ್ಯಮಿ ಎನ್ನಲಾದ ಜೈಪುರದ ಉದ್ಯಮಿಯೊಬ್ಬ 6 ಸಾವಿರ ಕೋಟಿ ರುಪಾಯಿ ಹಣದೊಂದಿಗೆ ಸರ್ಕಾರಕ್ಕೆ ಶರಣಾಗಿದ್ದಾರೆ ಎಂದು ಬೀಯಿಂಗ್ ಇಂಡಿಯನ್ ವರದಿ ಮಾಡಿದೆ.

ಇದರ ಜೊತೆಗೆ ಉದ್ಯಮಿ ಇನ್ನೂ 5400 ಕೋಟಿ ರೂಪಾಯಿಗಳನ್ನ ಸರ್ಕಾರಕ್ಕೆ ಪಾವತಿಸಬೇಕಿದೆ. 6 ಸಾವಿರ ಕೋಟಿಗೆ ಶೇ 30ರಷ್ಟು ಅಂದರೆ 1800 ಕೋಟಿ ರೂ, ತೆರಿಗೆ ಮತ್ತು ಶೇ 200ರಷ್ಟು ದಂಡ ಸೇರಿ ಒಟ್ಟು 5400 ಕೋಟಿ ರೂಪಾಯಿಗಳನ್ನ ಪಾವತಿಸಲಿದ್ದಾರೆ ಎಂದು ವರದಿಯಾಗಿದೆ.

ಸೂರತ್`ನ ಖ್ಯಾತ ಡೈಮಂಡ್ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ಕಿಂಗ್ ಎಂದೇ ಕರೆಯಲಾಗುವ ಈ ಉದ್ಯಮಿ ಹಬ್ಬಕ್ಕೆ ನೌಕರರಿಗೆ ಕಾರುಗಳನ್ನ ಕೊಟ್ಟು ಸುದ್ದಿ ಮಾಡಿದ್ದರು.

Comments are closed.