ಕರಾವಳಿ

ಮಂಗಳೂರಿನಲ್ಲಿ ‘ಬ್ಲ್ಯಾಕ್ ಆಂಡ್ ವೈಟ್, ಅರ್ಥಕ್ರಾಂತಿಗಾಗಿ ವಿನಮ್ರ ಆಗ್ರಹ’

Pinterest LinkedIn Tumblr

black_and_white_1

ಮಂಗಳೂರು, ನ.14 : ದೇಶದಲ್ಲಿ 500, 1000 ರೂ.ಗಳ ನೋಟುಗಳನ್ನು ರದ್ದು ಮಾಡುವ ಮೂಲಕ ಹೊಸ ಮನ್ವಂತರ ಸೃಷ್ಟಿಯಾಗಿದೆ ಎಂದು ಯುವಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅರ್ಥಕ್ರಾಂತಿ ಪ್ರತಿಷ್ಠಾನ ಮಂಗಳೂರು ವತಿಯಿಂದ ಉರ್ವ ಕೆನರಾ ಹೈಸ್ಕೂಲ್‌ನಲ್ಲಿ ನಿನ್ನೆ ನಡೆದ ‘ಬ್ಲ್ಯಾಕ್ ಆಂಡ್ ವೈಟ್, ಅರ್ಥಕ್ರಾಂತಿಗಾಗಿ ವಿನಮ್ರ ಆಗ್ರಹ’ ಎಂಬ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಸರಕಾರಿ ಬಂಗಲೆಯಲ್ಲಿದ್ದ ಬೇನಾಮಿ ವ್ಯಕ್ತಿಗಳನ್ನು ಬಂಗಲೆ ಬಿಡುವಂತೆ ಮಾಡಿಸಿದರು. ಆಗ ಅಸಹಿಷ್ಣುತೆ ಪಾಠ ಶುರುವಾಯಿತು. ಕಪ್ಪು ಹಣ ಇರುವವರು ಘೋಷಣೆ ಮಾಡಿ ಎಂದು ದಿನಾಂಕ ಕೊಟ್ಟು ಎಚ್ಚರಿಕೆ ನೀಡಿದರು.

ದಂಡ ಹಾಕುವ ಬಗ್ಗೆ ಹೇಳಿದರು. ಮುಂದೆ ನನ್ನನ್ನು ಬೈಯಬೇಡಿ ಎಂದು ಜನರಲ್ಲಿ ಹೇಳಿದರು. ಆದರೆ ಇದ್ಯಾವುದಕ್ಕೂ ಕೆಲವು ಕಪ್ಪುಹಣ ಇದ್ದವರು ಸೊಪ್ಪುಹಾಕಲಿಲ್ಲ. ಯಾಕೆಂದರೆ ಮನಮೋಹನ್ ಸಿಂಗ್‌ರಂತೆ ಇವರು ಕೂಡ ಏನೂ ಮಾಡಲು ಆಗಲ್ಲ ಎಂದೇ ಭಾವಿಸಿದ್ದರು. ಆದರೆ ಯಾರಿಗೂ ಒಂದೇ ಒಂದು ಸುಳಿವು ನೀಡದೆ ಮೋದಿ ಕ್ಷಿಪ್ರಕ್ರಾಂತಿ ಮಾಡಿದ್ದಾರೆ ಎಂದರು.

ಹಳೆಯ ನೋಟು ನಿಷೇಧದ ಕಾರಣದಿಂದ ದೇಶದ ಬ್ಯಾಂಕ್‌ಗಳಲ್ಲಿ ಕಳೆದ 3-4 ದಿನದಲ್ಲಿ ಸಂಗ್ರಹವಾಗಿರುವ ಒಟ್ಟು ಹಣ 4 ಲಕ್ಷ ಕೋ.ರೂ. ಕೇವಲ ಎಸ್‌ಬಿಐ ಒಂದರಲ್ಲಿಯೇ ೨.೧೫ ಲಕ್ಷ ಕೋಟಿ ರೂ. ಹಣ ಸಂಗ್ರಹವಾಗಿದೆ. ಬ್ಯಾಂಕ್‌ನಲ್ಲಿ ಹಣ ಅಧಿಕವಾದಾಗ, ಲೋನ್‌ಗಳು ಜನರಿಗೆ ಸುಲಭವಾಗಿ ಸಿಗಲಾರಂಭಿಸುತ್ತದೆ. ಇದರಿಂದ ಮುಂದೆ ಬ್ಯಾಂಕಿನವರೇ ಲೋನ್ ಬೇಕಾ ಎಂದು ಮನೆಗೆ ಬರುವ ಪ್ರಮೇಯ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ರವೀಂದ್ರನಾಥ್ ಶ್ಯಾನ್‌ಭೋಗ್, ದೇವದಾಸ್ ಕಾಪಿಕಾಡ್, ಡಿ. ಆಲ್ವಿನ್ ರೊಡ್ರಿಗಸ್, ಎನ್.ಜಯ ಶೆಟ್ಟಿ, ಜಿ. ಜಿನೇಂದ್ರ ಕುಮಾರ್, ಮುಖೇಶ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

Comments are closed.