ರಾಷ್ಟ್ರೀಯ

ಅರ್ಥ`ಕ್ರಾಂತಿ`ಗೆ ಜನಬೆಂಬಲ: ಮೋದಿ

Pinterest LinkedIn Tumblr

modhiಪಣಜಿ, ನ. ೧೩- ಕಪ್ಪು ಹಣದ ವಿರುದ್ಧ ಸರ್ಕಾರ ಕೈಗೊಂಡ ನಿಖರ ದಾಳಿಯ ಈ ಯೋಜನೆಯನ್ನು ದೇಶದ ಜನವೇ ಯಶಸ್ಸು ಗೊಳಿಸಿದ್ದಾರೆ. ಪ್ರಾಮಾಣಿಕ ಜನರಿಗೆ ಸಹಾಯ ಮಾಡಲು, ಭ್ರಷ್ಟಾಚಾರಗಳನ್ನು ನಿಗ್ರಹಿಸಲು ಹೆಚ್ಚು ಬೆಲೆಯ ನೋಟುಗಳನ್ನು ಹಿಂತೆಗೆದು ಕೊಳ್ಳಲಾಯಿತು. ಇದರಿಂದ ಜನರು ಅನುಭವಿಸುತ್ತಿರುವ ಸಂಕಷ್ಟ ಕೇವಲ 50 ದಿನಗಳವರೆಗೆ ಮಾತ್ರ ಎಂದು ಪ್ರಧಾನಿ ಮೋದಿ ಇಂದಿಲ್ಲಿ ಹೇಳಿದ್ದಾರೆ.

ಇದರಿಂದ ದೀರ್ಘಕಾಲಿಕ ಲಾಭ ದೇಶಕ್ಕೆ ಆಗುತ್ತಿದೆ. ಇದನ್ನು ಮನಗಂಡಿರುವ ಜನ ಸಾಮಾನ್ಯರು ಎದುರಾಗಿರುವ ತಾತ್ಕಾಲಿಕ ಸಂಕಷ್ಟವನ್ನು ದೇಶದ ಹಿತದೃಷ್ಟಿಯಿಂದ ಸಹಿಸಿಕೊಂಡಿದ್ದಾರೆ. ಹೀಗಾಗಿ ಇದರ ಯಶಸ್ಸು 125 ಕೋಟಿ ಭಾರತೀಯರಿಗೆ ಸಲ್ಲಬೇಕು ಎಂದು ಪ್ರಧಾನಿ ಮೋದಿ ಇಲ್ಲಿಯ ಮೊಪಾದ ಹಸಿರು ವಿಮಾನ ನಿಲ್ದಾಣ ಉದ್ಘಾಟಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ಕೋಟಿಗರು ಸಾಲಿನಲ್ಲಿ

ಸರ್ಕಾರದ ಈ ಕ್ರಮ ಕೋಟಿ ಕೋಟಿ ರೂ. ಹೊಂದಿರುವವರನ್ನು ಸರತಿಯ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಕೋಟಿಗರನ್ನು ಸಾಲಿನಲ್ಲಿ

ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಸರತಿ ಸಾಲಿನಲ್ಲಿ ನಿಂತಿದ್ದನ್ನು ಟೀಕಿಸಿದ ಪ್ರಧಾನಿ ಮೋದಿ ಕೋಟಿ ಕೋಟಿ ಅಕ್ರಮ ಹಣ ಹೊಂದಿರುವವರನ್ನು ಈ ಯೋಜನೆ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ ಎಂದರು.

ಪ್ರಾಮಾಣಿಕ ಜನಕ್ಕೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಅವರು ಕಷ್ಟಪಟ್ಟು ದುಡಿದ ಹಣ ಎಲ್ಲಿಯೂ ಹೋಗುವುದಿಲ್ಲ ಎಂದು ಭರವಸೆಕೊಡುತ್ತೇನೆ ಎಂದ ಪ್ರಧಾನಿ ಮೋದಿ ಅಕ್ರಮ ಹಣ ದಂಧೆಕೋರರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದರು.

ಡಿ. 31ರ ನಂತರ ಶಿಕ್ಷಿಸಿ

`ಈ ಯೋಜನೆಯ ಪ್ರತಿಫಲ ಡಿಸೆಂಬರ್ 31ರ ನಂತರ ನೋಡಿ. ಆ ನಂತರವೂ ನಾನು ಈ ಯೋಜನೆಯಲ್ಲಿ ವಿಫಲ ಎಂದು ಕಂಡು ಬಂದರೆ ನನ್ನನ್ನು ಶಿಕ್ಷಿಸಿ` ಎಂದು ಜನರತ್ತ ನೋಡಿ ಹೇಳಿದ ಮೋದಿ, ದೇಶದ ಒಳಿತಿಗಾಗಿ ಇಂತಹ ಕಠಿಣ ಕ್ರಮಗಳು ಅನಿವಾರ್ಯ.

ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಇಲ್ಲಿಗೇ ನಿಲ್ಲುವುದಿಲ್ಲ, ಭ್ರಷ್ಟಾಚಾರ ನಿಗ್ರಹದ ಹಾದಿಯಲ್ಲಿ ಇದು ಸರ್ಕಾರದ ಮೊದಲ ಹೆಜ್ಜೆ. ಇಂತಹ ಕಠಿಣ ಕ್ರಮಗಳನ್ನು ಇನ್ನು ನಿರೀಕ್ಷಿಸಬಹುದು ಎಂದರು.

ಭ್ರಷ್ಟಾಚಾರದ ವಿರುದ್ಧ, ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳಲು ಜನರೇ ಆಗ್ರಹಿಸಿದರು. ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದ ಪ್ರಧಾನಿ ಮೋದಿ, ತಮಗೆ ಪ್ರಧಾನಿ ಹುದ್ದೆ ಉಳಿಸಿಕೊಳ್ಳುವ ಮೋಹ ಇಲ್ಲ ದೇಶದ ಒಳಿತೇ ಮುಖ್ಯ ಎಂದರು.

ಪ್ರಧಾನಿ ಮೋದಿ ಇಂದು ಮೊದಲಿಗೆ ಗೆಲ್ಲುವ ಮೋಪಾದಲ್ಲಿಯ ಹಸಿರು ವಿಮಾನ ನಿಲ್ದಾಣದ ಉದ್ಘಾಟನೆ ಮಾಡಿದರು. ನಂತರದಲ್ಲಿ ಉತ್ತರ ಗೋವಾದ ಎಲೆಕ್ಟ್ರಾನಿಕ್ ಸಿಟಿ ಯೋಜನೆಯನ್ನು ಉದ್ಘಾಟಿಸಿದರು.

500 ರೂ. ಮತ್ತು 1000 ರೂ. ನೋಟುಗಳ ಚಲಾವಣೆಯನ್ನು ಹಿಂದೆ ಪಡೆದ ನಂತರದಲ್ಲಿ ಮೊದಲ ಬಾರಿಗೆ ಇಂದು ಇಲ್ಲಿಯ ಡಾ. ಶಾಮಾಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

Comments are closed.