ಕ್ರೀಡೆ

ಬೆಂಗಳೂರಿನ ಆಟಗಾರ್ತಿ ಅದಿತಿ ಅಶೋಕ್ ಮುಡಿಗೆ ಇಂಡಿಯನ್ ಓಪನ್ ಗಾಲ್ಫ್ ಕಿರೀಟ

Pinterest LinkedIn Tumblr

aditi-ashok-fiನವದೆಹಲಿ: ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌ ಇಂಡಿಯನ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಲೇಡೀಸ್ ಯುರೋಪಿಯನ್ ಟೂರ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಅದಿತಿ ಭಾಜನರಾಗಿದ್ದಾರೆ.

ಒಂಭತ್ತನೇ ಸ್ಥಾನದಲ್ಲಿದ್ದ ಅದಿತಿ, 17ನೇ ಕುಳಿ (ಹೋಲ್) ನಂತರ 2ನೇ ಸ್ಥಾನಕ್ಕೆ ಜಿಗಿದಿದ್ದರು, ಇನ್ನೇನು ಕಿರೀಟ ಗೆಲ್ಲಲು ಒಂದೇ ಒಂದು ಪಾಯಿಂಟ್ ಅಂತರದಲ್ಲಿದ್ದಾಗ ಕೊನೆಯ ಹೋಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಸ್ತುತ ಕಿರೀಟವನ್ನು ತನ್ನದಾಗಿಸಿಕೊಂಡರು.

ಮೊದಲ ಸುತ್ತಿನಲ್ಲಿ ಮತ್ತು ಮೂರನೇ ಸುತ್ತಿನಲ್ಲಿ 72 ಪಾಯಿಂಟ್ ಗಳಿಸಿದ್ದ ಅದಿತಿ ಎರಡನೇ ಸುತ್ತಿನಲ್ಲಿ 69 ಪಾಯಿಂಟ್ ಗಳಿಸಿದ್ದರು.

ಬೆಂಗಳೂರು ಮೂಲದ 18ರ ಹರೆಯದ ಅದಿತಿ ರಿಯೊ ಒಲಿಂಪಿಕ್ಸ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದರು.

Comments are closed.