ಕರ್ನಾಟಕ

2000 ರೂ.ನ ಜೆರಾಕ್ಸ್ ನೋಟಿನಲ್ಲಿ ಆಮಂತ್ರಣ ಪತ್ರ

Pinterest LinkedIn Tumblr

fake-notesಕಾಸರಗೋಡು, ನ.೧೩- ದೇಶವ್ಯಾಪಿ ೫೦೦, ೧೦೦೦ ರೂ. ಮುಖಬೆಲೆಯ ಹಳೆಯ ನೋಟು ಚಲಾವಣೆಯನ್ನು ನಿಲ್ಲಿಸಿ ೨೦೦೦ ರೂ. ಹೊಚ್ಚ ಹೊಸ ನೋಟನ್ನು ಮುದ್ರಿಸಿ ಸರಬರಾಜಾಗುತ್ತಿದ್ದರೆ ಇತ್ತಕಡೆ ಹೊಸ ನೋಟನ್ನೇ ಕಲರ್ ಝೆರಾಕ್ಸ್ ಮಾಡಿ ಅದರಲ್ಲೇ ಮದುವೆ ಆಮಂತ್ರಣವನ್ನು ಮುದ್ರಿಸಿ ಎಲ್ಲೆಂದರಲ್ಲಿ ಹಂಚುತ್ತಿರುವ ಘಟನೆ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ.
೨೦೦೦ ರೂ. ಮುಖಬೆಲೆಯ ನೋಟಿನ ಮಾದರಿಯಲ್ಲಿ ಕಾಸರಗೋಡು ರಿಸರ್ವ್ ಬ್ಯಾಂಕ್, ಗ್ಯಾರಂಟೀಡ್ ಬೈ ಮುನ್ನಾ ಇಮಾರತ್ ಎಂದು ಬರೆಯಲಾಗಿದ್ದು, ಮದುವೆಯ ದಿನಾಂಕವನ್ನು ಸೀರಿಯಲ್ ನಂಬ್ರ ಇದ್ದ ಜಾಗದಲ್ಲಿ ಹಾಕಲಾಗಿದೆ. ಕೆಳಗೆ ಮೊಬೈಲ್ ನಂಬ್ರ ೯೭೪೭೭೮೧೮೬೧ ಬರೆಯಲಾಗಿದ್ದು ಮದುವೆ ಜೋಡಿಗಳ ಹೆಸರನ್ನೂ ಬರೆಯಲಾಗಿದೆ. ಆಯಿಷತ್-ಸಕೀವಾ ಫಾಹಿಂ, ನಿಜಾಮುದ್ದೀನ್-ಫತಿಲ್ಲತ್ ಎಂದು ಬರೆಯಲಾಗಿದೆ.

Comments are closed.