ರಾಷ್ಟ್ರೀಯ

ನೋಟ ಬ್ಯಾನ್; ರಾತ್ರಿ 9ರವರೆಗೂ ಕಾರ್ಯ ನಿರ್ವಹಿಸಲು ಸಿದ್ಧ ಎಂದ ಬ್ಯಾಂಕ್

Pinterest LinkedIn Tumblr

A large queue of people wait outside a bank to exchange Indian currency in the denominations of 1000 and 500 that have been declared to be of no value, in New Delhi, India, Friday, Nov. 11, 2016. Delivering one of India's biggest-ever economic upsets, Prime Minister Narendra Modi this week declared the bulk of Indian currency notes no longer held any value and told anyone holding those bills to take them to banks to deposit or exchange them. (AP Photo/Saurabh Das)

ನವದೆಹಲಿ: 500 ಮತ್ತು 1000 ನೋಟುಗಳ ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಕೆಲ ಬ್ಯಾಂಕ್ ಗಳು ಮುಂದೆ ಬಂದಿದ್ದು, ರಾತ್ರಿ 9ರವೆರಗೂ ಕಾರ್ಯ ನಿರ್ವಹಿಸಲು ತಾವು ಸಿದ್ಧ ಎಂದು ಹೇಳಿವೆ.

ನೋಟುಗಳ ನಿಷೇಧದ ಬಳಿಕ ನಿನ್ನೆಯಿಂದ ಬ್ಯಾಂಕ್ ಗಳು ಕಾರ್ಯಾರಂಭ ಮಾಡಿದ್ದು, ಭಾರಿ ಪ್ರಮಾಣದಲ್ಲಿ ನೋಟು ಬದಲಾವಣೆ ಜನ ಮುಗಿಬಿದಿದ್ದಾರೆ. ಈ ಹಿನ್ನಲೆಯಲ್ಲಿ ಜನರ ಸಂಕಷ್ಚವನ್ನು ಅರಿತಿರುವ ಕೆಲ ಬ್ಯಾಂಕ್ ಸಂಸ್ಥೆಗಳು ರಾತ್ರಿ 9ರವರೆಗೂ ಕಾರ್ಯ ನಿರ್ವಹಿಸಲು ಮುಂದೆ ಬಂದಿವೆ ಎಂದು ತಿಳಿದುಬಂದಿದೆ. ಕೆಲ ಖಾಸಗಿ ಬ್ಯಾಂಕ್ ಗಳು ರಾತ್ರಿ 8ರವೆರೆಗೂ ಕಾರ್ಯ ನಿರ್ವಹಿಸಲು ನಿರ್ಧರಿಸಿದ್ದರೆ, ರಾಷ್ಟ್ಕೀಕೃತ ಬ್ಯಾಂಕ್ ಎಸ್ ಬಿಐ ರಾತ್ರಿ 9ರವೆರಗೂ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದೆ.

ಇನ್ನು ಆರ್ ಬಿಐ ಎಲ್ಲ ಬ್ಯಾಂಕ್ ನೌಕರರಿಗೆ ಅನಗತ್ಯ ರಜೆಗಳನ್ನು ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದು, ಬಹುತೇಕ ಸಿಬ್ಬಂದಿಗಳ ರಜೆಗಳನ್ನು ಮೊಟಕುಗೊಳಿಸಲಾಗಿದೆ. ಅಲ್ಲದೆ ತುರ್ತು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಖಾಸಗಿ ಸುದ್ದಿ ಪತ್ರಿಕೆಯೊಂದು ವರದಿ ಮಾಡಿರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕಿಶೋರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಸಮೂಹದ ಬ್ಯಾಂಕ್ ಗಳ ಕೆಲ ಶಾಖೆಗಳು ರಾತ್ರಿ 9ರವೆರಗೂ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದ್ದಾರೆ.

ತರಬೇತಿ ರದ್ದುಗೊಳಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್!
ಇನ್ನು ಬ್ಯಾಂಕ್ ಗಳತ್ತ ಮುಗಿಬಿದ್ದಿರುವ ಜನರನ್ನು ನಿರ್ವಹಣೆ ಮಾಡಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಂಸ್ಥೆ ತನ್ನ ಬ್ಯಾಂಕ್ ಗಳಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುತ್ತಿದ್ದು, ಇದಕ್ಕಾಗಿ ತನ್ನ ತರಬೇತಿ ನಿರತ ಸಿಬ್ಬಂದಿಗಳನ್ನೇ ಕರ್ತವ್ಯಕ್ಕೆ ನಿಯೋಜಿಸಿದೆ ಎಂದು ಹೇಳಲಾಗುತ್ತಿದೆ. ತನ್ನ ಎಲ್ಲ ಬ್ಯಾಂಕುಗಳಲ್ಲಿಯೂ ವಿಶೇಷ ಕೌಂಟರ್ ಗಳನ್ನು ತೆರೆದು ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರ ನಡೆಸುವಂತೆ ಸೂಚನೆ ನೀಡಿದೆ. ಪ್ರಮುಖವಾಗಿ ಮಹಿಳೆಯರಿಗೆ ಮತ್ತು ವೃದ್ಧರಿಗೆ ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಎಸ್ ಬಿಐ ಹಾಗೂ ಪಿಎನ್ ಬಿ ಬ್ಯಾಂಕ್ ಗಳಿಂದ ಉತ್ತೇಜನ ಪಡೆದು ಮತ್ತಷ್ಟು ಬ್ಯಾಂಕ್ ಗಳು ತಮ್ಮ ಕಾರ್ಯಾವಧಿಯನ್ನು ವಿಸ್ತರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Comments are closed.