ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿಯ ನೋಟ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ(ಐಟಿ) ದೇಶಾದ್ಯಂತ ಹಲವು ನಗರಗಳಲ್ಲಿ ಗುರುವಾರ ದಾಳಿ ನಡೆಸಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ದೆಹಲಿ, ಲೂದಿಯಾನ, ಚಂಡೀಗಢ ಹಾಗೂ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಳೆ ನೋಟುಗಳ ಬದಲಿಗೆ ಚಿನ್ನ, ವಿದೇಶಿ ಕರೆನ್ಸಿಗಳನ್ನು ನೀಡುವ ಹವಾಲ ಏಜೆನ್ಸಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅಪಾರ ಪ್ರಮಾಣದ ನೋಟ್ ಗಳನ್ನು ಜಪ್ತಿ ಮಾಡಿದ್ದಾರೆ.
ದೇಶದಲ್ಲಿ ಭ್ರಷ್ಟಾಚಾರ, ಕಪ್ಪುಹಣ ಹಾಗೂ ಖೋಟಾ ನೋಟ್ ಗಳ ಹಾವಳಿ ತಡೆಯುವುದಕ್ಕಾಗಿ 500 ಹಾಗೂ 1000 ನೋಟ್ ಗಳನ್ನು ನಿಷೇಧಿಸುತ್ತಿರುವುದಾಗಿ ಕಳೆದ ಮಂಗಳವಾರ ರಾತ್ರಿ ಘೋಷಿಸಿದ್ದರು. ಇದಾದ ಬಳಿಕ ದೇಶಾದ್ಯಂತ ಜನ ದೈನಂದಿನ ವ್ಯವಹಾರಕ್ಕಾಗಿ ಪರದಾಡುತ್ತಿದ್ದು, ಇಂದು ಹೊಸ 2000 ರುಪಾಯಿ ನೋಟ್ ಪಡೆಯಲು ಹಾಗೂ ಹಳೆ 500 ಮತ್ತು 1000 ರುಪಾಯಿ ನೋಟ್ ಬದಲಾವಣೆಗೆ ಬ್ಯಾಂಕ್ ಗಳ ಮುಂದೆ ಕ್ಯೂ ನಿಂತಿದ್ದಾರೆ.
ರಾಷ್ಟ್ರೀಯ
Comments are closed.