ರಾಷ್ಟ್ರೀಯ

ಗುರುವಾರ ಮಧ್ಯರಾತ್ರಿಯಿಂದ ಎಟಿಎಂಗಳಲ್ಲಿ ಹೊಸ 500 ಮತ್ತು 2000 ನೋಟುಗಳು: ಅರುಣ್ ಜೇಟ್ಲಿ

Pinterest LinkedIn Tumblr

noteನವದೆಹಲಿ: ನೂತನವಾಗಿ ಬಿಡುಗಡೆಯಾಗಿರುವ ೫೦೦ ಮತ್ತು ೨೦೦೦ ರೂ ಮೌಲ್ಯದ ನೋಟುಗಳನ್ನು ಗ್ರಾಹಕರು ಎಟಿಎಂಗಳಿಂದ ಗುರುವಾರ ಮಧ್ಯರಾತ್ರಿಯಿಂದ ಪಡೆಯಬಹುದಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
“ಇಂದು (ಗುರುವಾರ) ಮಧ್ಯರಾತ್ರಿಯಿಂದ ಎಟಿಎಂಗಳು ಕೆಲಸ ಪ್ರಾರಂಭಿಸಲಿವೆ. ಜನರು ನೂತನ ನೋಟುಗಳನ್ನು ಪಡೆಯಬಹುದು” ಎಂದು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನವೆಂಬರ್ ೮ ಮಧ್ಯರಾತ್ರಿಯಿಂದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಈಗ ಹೊಸ ನೋಟುಗಳನ್ನು ಗುರುವಾರದಿಂದ ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳಲ್ಲಿ ಕೂಡ ವಿತರಿಸಲಾಗುತ್ತಿದೆ.
ಗುರುವಾರ ಬ್ಯಾಂಕ್ ಮತ್ತು ಅಂಚೆ ಕಚೇರಿಗಳ ಮುಂದೆ ಜನ ಉದ್ದುದ್ದ ಸಾಲುಗಟ್ಟಿದ್ದು ಸರ್ವೇ ಸಾಮನ್ಯವಾಗಿತ್ತು. ಈಗ ಮಧ್ಯರಾತ್ರಿಯಿಂದ ಎಟಿಎಂ ನಲ್ಲಿ ಹಣ ಸಿಗುವದರಿಂದ ಪರಿಸ್ಥಿತಿ ತಿಳಿಗೊಂದು ಜನರ ಭೀತಿ ಕಡಿಮೆಯಾಗಲಿದೆ ಎನ್ನಲಾಗಿದೆ.
ಸದ್ಯದ ಆರ್ಥಿಕ ವ್ಯವಸ್ಥೆಯಲ್ಲಿ ೧೪ ಲಕ್ಷ ಕೋಟಿ ರೂ ದೊಡ್ಡ ಮೌಲ್ಯದ ನೋಟುಗಳಿಂದ ಚಲಾವಣೆಯಲ್ಲಿದೆ ಎಂದು ತಿಳಿಸಿರುವ ಜೇಟ್ಲಿ “ಇದರಲ್ಲಿ ಎಷ್ಟು ಹೊಸ ನೋಟುಗಳಿಂದ ಬದಲಾಗುತ್ತದೆಯೋ ನನಗೆ ಊಹಿಸಲು ಸಾಧ್ಯವಿಲ್ಲ” ಎಂದಿದ್ದಾರೆ.

Comments are closed.