ಕರ್ನಾಟಕ

ಅಶ್ಲೀಲ ಫೋಟೋ ನೋಡಿಲ್ಲ: ತನ್ವಿರ್ ಸೇಠ್ ಸ್ಪಷ್ಟನೆ

Pinterest LinkedIn Tumblr

tanveer-saitರಾಯಚೂರು: ಟಿಪ್ಪು ಜಯಂತಿ ಆಚರಣೆ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಮ್ಮ ಫೋನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಬೆಳಗ್ಗೆಯಿಂದಲೇ ನನ್ನ ಮೊಬೈಲ್‍ಗೆ ಮೆಸೆಜ್ ಗಳು ಬರ್ತಾ ಇದ್ದವು. ಹೀಗಾಗಿ ಆ ಕತೂಹಲದಿಂದ ಮೆಸೇಜ್ ಗಳನ್ನು ಓಪನ್ ಮಾಡುವ ಸಂಧಭ್ದಲ್ಲಿ ಒಂದಷ್ಟು ಫೋಟೋಗಳು ಬಂದವು. ಆದರೆ ಅದ್ಯಾವುದನ್ನು ನಾನಾಗಿ ಡೌನ್ ಲೋಡ್ ಮಾಡಿಲ್ಲ. ಮಾತ್ರವಲ್ಲದೇ ಅದೇನು ಫೋಟೋಗಳು ಎಂಬುವುದನ್ನು ನೋಡುವ ಗೋಜಿಗೂ ಹೋಗಿಲ್ಲ ಎಂದು ತಿಳಿಸಿದರು.

ಒಂದು ವೇಳೆ ಫೋಟೋಗಳು ತನ್ನಿಂತಾನೇ ಡೌನ್ ಲೋಡ್ ಆಗಿದ್ದರೂ ಅದನ್ನು ನೋಡಿಲ್ಲ. ಇಲ್ಲಿ ಉದ್ದೇಶಪೂರ್ವಕವಾಗಿ ನಾನು ಯಾವುದೇ ತಪ್ಪು ಮಾಡಿಲ್ಲ. ಬೇಕಿದ್ದಲ್ಲಿ ಈ ಬಗ್ಗೆ ತನಿಖೆ ನಡೆಯಲಿ. ನಾನು ಎದುರಿಸಲು ಸಿದ್ದ ಎಂಬುವುದಾಗಿ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇಂದು ಆಯೋಜನೆಗೊಂಡ ಟಿಪ್ಪು ಜಯಂತಿ ಅಚರಣೆ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ತಮ್ಮ ವಾಟ್ಸಪ್‍ಗೆ ಬಂದಿದ್ದ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

Comments are closed.