ರಾಷ್ಟ್ರೀಯ

ಪಾಕ್ ನಲ್ಲಿ ಮುದ್ರಣಗೊಂಡು ಬರುತ್ತಿದ್ದ ನಕಲಿ ನೋಟುಗಳಿಗೆ ಕಡಿವಾಣ

Pinterest LinkedIn Tumblr

money-1ನವದೆಹಲಿ: ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್‍ಗೆ ನಲುಗಿ ಹೋಗಿದ್ದ ಪಾಕ್ ಉಗ್ರರಿಗೆ ಮೋದಿ ಸರ್ಕಾರ ಈಗ ಮತ್ತೊಂದು ಶಾಕ್ ನೀಡಿದ್ದು, ಭಯೋತ್ಪಾದನೆಗೆ ಸಿಗುತ್ತಿದ್ದ ಆರ್ಥಿಕ ಸಹಾಯವನ್ನು ನಿಲ್ಲಿಸಲು 500, 1000 ರೂ. ಮುಖಬೆಲೆಯ ನೋಟುಗಳನ್ನೇ ಸಂಪೂರ್ಣವಾಗಿ ಹಿಂಪಡೆದಿದೆ. ಈ ನಿರ್ಧಾರದಿಂದಾಗಿ ಪಾಕಿಸ್ತಾನದಲ್ಲಿ ಮುದ್ರಣಗೊಂಡು ಭಾರತಕ್ಕೆ ಬರುತ್ತಿದ್ದ ನಕಲಿ ನೋಟು ಮತ್ತು ಕಪ್ಪು ನೋಟುಗಳ ವ್ಯವಹಾರ ಬಂದ್ ಆಗಲಿದೆ.

ಹೌದು. ಪಾಕಿಸ್ತಾನದ ಪೇಶಾವರ ಪ್ರಿಂಟಿಂಗ್ ಪ್ರಸ್‍ನಲ್ಲಿ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳು ಉತ್ಪಾದನೆಯಾಗಿ ಉಗ್ರರಿಗೆ ಪೊರೈಕೆ ಆಗುತಿತ್ತು. ಈಗ ಈ ಖೋಟಾ ನೋಟ್ ಉದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದೆ.

ಭಾರತದ ರಿಸರ್ವ್ ಬ್ಯಾಂಕ್(ಆರ್‍ಬಿಐ) ಜಾರಿಗೆ ತಂದ 500 ಹಾಗೂ 1000 ರೂಪಾಯಿಯ ಹೊಸ ನೋಟ್‍ಗಳನ್ನು ಎಲ್ಲಿಯೂ ಪಾಕಿಸ್ತಾನ ಸೇರಿದಂತೆ ಎಲ್ಲೂ ನಕಲಿ ಮಾಡಲು ಸಾಧ್ಯವಿಲ್ಲ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದು, ಗುಪ್ತಚರ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಕಳೆದ 6 ತಿಂಗಳುಗಳಿಂದ ಪರಿಶೀಲಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ನೋಟಿನಲ್ಲಿ ಅಂಥ ವಿಶೇಷತೆ ಏನಿದೆ ಎನ್ನುವುದನ್ನು ಅವರು ಬಹಿರಂಗ ಪಡಿಸಿಲ್ಲ.

ಪೇಶಾವರದಲ್ಲಿ ಮುದ್ರಣಗೊಂಡ ಈ ನೋಟುಗಳು ಬಳಿಕ ದಾವೂದ್ ಗ್ಯಾಂಗ್ ಮತ್ತು ಲಷ್ಕರ್ ಮುಂತಾದ ಭಯೋತ್ಪಾದಕ ಸಂಘಟನೆಗಳಿಗೆ ಪೂರೈಕೆಯಾಗುತ್ತಿತ್ತು. ಆದರೆ ಇನ್ನು ಮುಂದೆ ಇಂತಹ ಕೃತ್ಯಗಳಿಗೆ ಫುಲ್ ಸ್ಟಾಪ್ ಹಾಕಲಾಗುತ್ತದೆ ಎಂಬುವುದಾಗಿ ಇಲಾಖೆ ತಿಳಿಸಿದೆ.

ಪಾಕಿಸ್ತಾನವು ಈವರೆಗೆ ಸುಮಾರು 70 ಕೋಟಿಯಷ್ಟು ನಕಲಿ ನೋಟ್ ಗಳನ್ನು ಮುದ್ರಿಸಿ ಭಯೋತ್ಪಾದಕರಿಗೆ ಸರಬರಾಜು ಮಾಡಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ, ಹಳೇಯ 500 ಹಾಗೂ 1000 ರೂ. ನೋಟ್ ಗಳ ಮೇಲೆ ಭಾರತ ನಿಷೇಧ ಹೇರಿರುವುದರಿಂದ ಪಾಕಿಸ್ತಾನದ ಖೋಟಾನೋಟು ತಯಾರಕರಿಗೆ ಈಗ ಕೆಲಸವಿಲ್ಲದಾಗಿದೆ ಎಂದಿದ್ದಾರೆ.

Comments are closed.