ರಾಷ್ಟ್ರೀಯ

ದೆಹಲಿಯಷ್ಟೇ ಅಲ್ಲ, 94 ನಗರಗಳಲ್ಲಿ ಇದೆ ವಾಯು ಮಾಲಿನ್ಯ!

Pinterest LinkedIn Tumblr

air-pollution-1ನವದೆಹಲಿ: ದೆಹಲಿಯಲ್ಲಿ ದಟ್ಟ ಹೊಗೆ ಆವರಿಸಿದ್ದು, ಕಳೆದ 17 ವರ್ಷಗಳಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯ ಪೀಡಿತ ಪ್ರದೇಶವಾಗಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ, ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಘಾತಕಾರಿ ಅಂಶ ಹೊರಬಿದ್ದಿದೆ.
ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ, 2011 ರಿಂದ ಈ ವರೆಗೆ 94 ಭಾರತೀಯ ನಗರಗಳು ರಾಷ್ಟ್ರೀಯ ವಾಯು ಗುಣಮಟ್ಟದ ದರ್ಜೆಯನ್ನು ತಲುಪಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ರಾಷ್ಟ್ರೀಯ ರಾಷ್ಟ್ರೀಯ ವಾಯು ಗುಣಮಟ್ಟದ ದರ್ಜೆಯನ್ನು ತಲುಪದ ನಗರಗಳ ಪಟ್ಟಿಯಲ್ಲಿ ಹಲವು ನಗರಗಳು 1990 ರಿಂದಲೂ ಹಾಗೆಯೇ ಉಳಿದುಕೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಅಧಿಕಾರಿಗಳು ತಿಳಿಸಿದ್ದಾರೆ.
ಗುಣಮಟ್ಟ ದರ್ಜೆಯನ್ನು ತಲುಪದ ನಗರಗಳ ಪಟ್ಟಿಯಿಂದ ನಗರಗಳನ್ನು ಹೊರತರುವುದಕ್ಕೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರಗಳಾಗಲಿ ಪರಿಣಾಮಕಾರಿಯಾದ ಯೋಜನೆಗಳನ್ನು ಈ ವರೆಗೂ ಜಾರಿಗೆ ತಂದಿಲ್ಲ. ಇದು ದೇಶದ ಆಂತರಿಕ ಸಂಸ್ಥೆಗಳು ನೀಡಿರುವ ವರದಿಯಾದರೆ, ವಿಶ್ವಸಂಸ್ಥೆ ಪ್ರಕಟ ಮಾಡಿರುವ ವಿಶ್ವದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ 20 ನಗರಗಳ ಪಟ್ಟಿಯಲ್ಲಿ 10 ನಗರಗಳು ಭಾರತದ್ದೇ ಆಗಿವೆ ಎಂಬುದು ಮತ್ತೊಂದು ಅಘಾತಕಾರಿ ಅಂಶವಾಗಿದೆ, ಕಳೆದ ಕೆಲವು ವರ್ಷಗಳಿಂದ ದೆಹಲಿ, ಖಾನ್ ಪುರ, ಲಖನೌ, ವಾರಾಣಸಿ ನಗರಗಳ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿವೆ. ಇಷ್ಟಾದರೂ ಈ ವರೆಗೂ ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ ನಗರಗಳ ಸ್ಥಳೀಯ ಆಡಳಿತಗಳು ಜಾಗೃತಗೊಂಡಿಲ್ಲ.

Comments are closed.