ರಾಷ್ಟ್ರೀಯ

ಶೀಘ್ರದಲ್ಲೇ ಜಿಯೋದ 45 ಸಾವಿರ ಹೊಸ ಟವರ್’ಗಳ ನಿರ್ಮಾಣ

Pinterest LinkedIn Tumblr

jioನವದೆಹಲಿ: ಹೊಸ ಸಂಚಲನ ಮೂಡಿಸಿರುವ ರಿಲಾಯನ್ಸ್ ಜಿಯೋ ಇನ್ಫೋಕಾಂ ಸಂಸ್ಥೆ ಮುಂದಿನ 4 ವರ್ಷಗಳಲ್ಲಿ ತನ್ನ 4ಜಿ ನೆಟ್ವರ್ಕ್ ಬಲಗೊಳಿಸಲು 1 ಲಕ್ಷ ಕೋಟಿ ರೂ ಹೂಡಿಕೆ ಮಾಡಲಿದೆ. ಆರು ತಿಂಗಳಲ್ಲಿ ದೇಶಾದ್ಯಂತ 45 ಸಾವಿರ ಮೊಬೈಲ್ ಟವರ್’ಗಳನ್ನು ನಿರ್ಮಿಸಲು ಜಿಯೋ ಉದ್ದೇಶಿಸಿದೆ. ನಿನ್ನೆ ಗುರುವಾರ ಕೇಂದ್ರ ಟೆಲಿಕಾಂ ಸಚಿವ ಮನೋಜ್ ಸಿನ್ಹಾರನ್ನು ಭೇಟಿ ಮಾಡಿದ ಬಳಿಕ ರಿಲಾಯನ್ಸ್ ಜಿಯೋ ಸಂಸ್ಥೆಯು ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ ಎಂದು ಪಿಟಿಐ ಸಂಸ್ಥೆಯು ತನ್ನ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ.
ಜಿಯೋ ನಂಬರ್’ನಿಂದ ಬೇರೆ ಟೆಲಿಕಾಂ ಆಪರೇಟರ್’ಗಳ ಮೊಬೈಲ್’ಗೆ ನಡೆಯುವ ಕರೆಗಳಲ್ಲಿ ಸಾಕಷ್ಟು ಕಾಲ್’ಡ್ರಾಪ್ ಸಮಸ್ಯೆ ಇದೆ. ಏರ್’ಟೆಲ್, ವೊಡಾಫೋನ್ ಮತ್ತು ಐಡಿಯಾ ಸಂಸ್ಥೆಗಳು ಜಿಯೋಗೆ ಅಗತ್ಯವಿರುವಷ್ಟು ಪಿಒಐ(ಪಾಯಿಂಟ್ ಆಫ್ ಇಂಟರ್’ಕನೆಕ್ಷನ್)ಗಳನ್ನು ನಿರ್ಮಿಸಿಲ್ಲದಿರುವುದು ಈ ಕಾಲ್’ಡ್ರಾಪ್ ಸಮಸ್ಯೆಗೆ ಕಾರಣವಾಗಿದೆ. ಕೇಂದ್ರ ಸಚಿವರು ಈ ವಿಚಾರವನ್ನು ಪ್ರಸ್ತಾಪಿಸಿ ಸಮಸ್ಯೆಯನ್ನು ಪರಸ್ಪರ ಸಮಾಲೋಚಿಸಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರೆನ್ನಲಾಗಿದೆ.
ರಿಲಾಯನ್ಸ್ ಜಿಯೋ ಸಂಸ್ಥೆ ತನ್ನ ನೆಟ್ವರ್ಕ್’ಗಳ ಸ್ಥಾಪನೆಗೆ ಈಗಾಗಲೇ 1.6 ಲಕ್ಷ ಕೋಟಿ ಹೂಡಿಕೆ ಮಾಡಿದೆ. ದೇಶಾದ್ಯಂತ 18 ಸಾವಿರ ನಗರ ಹಾಗೂ 2 ಲಕ್ಷ ಗ್ರಾಮಗಳನ್ನೊಳಗೊಂಡಂತೆ 2.82 ಲಕ್ಷ ಬೇಸ್ ಸ್ಟೇಶನ್’ಗಳನ್ನು ಸ್ಥಾಪಿಸಿದೆ. ಮುಂದಿನ 4 ವರ್ಷಗಳಲ್ಲಿ ಇನ್ನೂ 1 ಲಕ್ಷ ಕೋಟಿ ಹೂಡಿಕೆ ಮಾಡಿ ತನ್ನ 4ಜಿ ನೆಟ್ವರ್ಕನ್ನು ಇನ್ನಷ್ಟು ಬಲಪಡಿಸುವುದು ಜಿಯೋ ಯೋಜನೆಯಾಗಿದೆ.

Comments are closed.