ಕರ್ನಾಟಕ

ಬೆಂಗಳೂರು: ತಾಂಜೇನಿಯಾ ವಿದ್ಯಾರ್ಥಿಗಳಿಂದ ಹಾಲಿನ ವ್ಯಾಪಾರಿ ಹತ್ಯೆ

Pinterest LinkedIn Tumblr

tanjaniyaಬೆಂಗಳೂರು,ನ.೬-ನಗರದಲ್ಲಿ ಮತ್ತೆ ಆಫ್ರಿಕನ್ ವಿದ್ಯಾರ್ಥಿಗಳು ಪುಂಡಾಟ ನಡೆಸಿದ್ದಾರೆ. ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಮೂವರು ತಾಂಜೇನಿಯಾ ವಿದ್ಯಾರ್ಥಿಗಳು ಹಾಲು ಹಾಕಲು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿರುವ ದುರ್ಘಟನೆ ಸಂಪಿಗೆಹಳ್ಳಿಯ ಹೆಗ್ಗಡೆ ನಗರ ವೃತ್ತದಲ್ಲಿ ಇಂದು ನಸುಕಿನಲ್ಲಿ ನಡೆದಿದೆ.
ಹೆಗಡೆನಗರದ ವೇಲುಸ್ವಾಮಿ (೫೮) ಮೃತಪಟ್ಟವರು,ಕೃತ್ಯವೆಸಗಿದ ತಾಂಜೇನಿಯಾ ಮೂಲದ ವಿದ್ಯಾರ್ಥಿಗಳಾದ ಕೆಲ್ವಿನ್ ಸೇರಿ ಮೂವರು ಸ್ನೇಹಿತರನ್ನು ಚಿಕ್ಕಜಾಲ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ವೇಲುಸ್ವಾಮಿ ಅವರು ಮನೆಗೆ ಮನಗೆ ಹಾಲಿನ ಪ್ಯಾಕೇಟ್‌ಗಳನ್ನು ಹಾಕಲು ಮುಂಜಾನೆ ೫.೪೫ರ ವೇಳೆ ಸಂಪಿಗೆಹಳ್ಳಿಯ ಹೆಗ್ಗಡೆ ನಗರ ವೃತ್ತದಲ್ಲಿ ಟಿವಿಎಸ್ ಸ್ಕೊಟರ್‌ನಲ್ಲಿ ಹೋಗುತ್ತಿದ್ದರು,ಈ ವೇಳೆ ಮದ್ಯದ ಅಮಲಿನಲ್ಲಿ ಓಲ್ಟಾಸ್ ಕಾರು ಚಲಾಯಿಸಿಕೊಂಡು ಬಂದ ಕೆಲ್ವಿನ್ ಮತ್ತವನ ಇಬ್ಬರು ಸ್ನೇಹಿತರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನಡಿ ಸಿಕ್ಕಿಕೊಂಡ ಸ್ಕೂಟರ್ ಸುಮಾರು ೨ ಕಿ. ಮೀ.ವರೆಗೆ ಎಳೆದೊಯ್ದಿದಿದ್ದು ಸ್ಥಳದಲೇ ವೇಲುಸ್ವಾಮಿ ಅವರು ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಕೆಲ್ವಿನ್ ಸೇರಿ ಮೂವರು ನಾಗವಾರದ ಕಡೆ ತೆರಳುತ್ತಿದ್ದು ಇವೆರೆಲ್ಲರೂ ಕೋಶಿಶ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು ಪ್ರಕರಣ ದಾಖಲಿಸಿದ ಚಿಕ್ಕಜಾಲ ಸಂಚಾರ ಪೊಲೀಸರು ಕೃತ್ಯವೆಸಗಿದ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಡಿಸಿಪಿ ರೇಣುಕಾ ಅವರು ತಿಳಿಸಿದ್ದಾರೆ.
ಕ್ಯಾಬ್ ಚಾಲಕ ಸಾವು
ಮಾಗಡಿ ರಸ್ತೆಯ ಬಿನ್ನಿಮಿಲ್ ವೃತ್ತದಲ್ಲಿ ಇಂದು ನಸುಕಿನಲ್ಲಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ಕ್ಯಾಬ್ ಚಾಲಕರೊಬ್ಬರು ಮೃತಪಟ್ಟಿದ್ದಾರೆ.
ಜೆಪಿನಗರದ ವಿನೋದ್(೨೩)ಅವರು ರಾತ್ರಿ ಮಹಾಲಕ್ಷ್ಮಿ ಬಡಾವಣೆಯ ಅಜ್ಜಿ ಮನೆಗೆ ಹೋಗಿ ಜೆಪಿನಗರದ ಮನೆಗೆ ಮುಂಜಾನೆ ೨ರ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಬಿನ್ನಿಮಿಲ್ ವೃತ್ತದಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ವಿನೋದ್ ಅವರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಮಾಗಡಿ ರಸ್ತೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Comments are closed.