ರಾಷ್ಟ್ರೀಯ

ಮಿತಿಮೀರಿದ ವಾಯುಮಾಲಿನ್ಯ: ದೆಹಲಿಯಲ್ಲಿ ಇನ್ನೂ 3 ದಿನ ಶಾಲೆಗಳಿಗೆ ರಜೆ

Pinterest LinkedIn Tumblr
A cyclist covers his face while riding along a major road as smog covers the capital's skyline in New Delhi on November 2, 2016.  New Delhi's air quality has steadily worsened over the years, a consequence of rapid urbanisation that brings pollution from diesel engines, coal-fired power plants and industrial emissions. / AFP PHOTO / PRAKASH SINGH
A

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಮಿತಿಮೀರಿದ್ದು ಮುಂದಿನ ಮೂರು ದಿನಗಳ ಕಾಲ ದೆಹಲಿಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ವಾಯುಮಾಲಿನ್ಯ ಪ್ರಮಾಣ ತಗ್ಗಿಸುವ ಕ್ರಮಗಳ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭಾನುವಾರ ತುರ್ತು ಸಭೆ ನಡೆಸಿದರು.

ವಾಯುಮಾಲಿನ್ಯ ಮಟ್ಟ ತಗ್ಗಿಸಲು ತೆಗೆದುಕೊಂಡ ಕ್ರಮಗಳು:

* ದೆಹಲಿಯಲ್ಲಿ ಮುಂದಿನ 5 ದಿನಗಳ ಕಾಲ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಕೆಡವುವ ಕಾರ್ಯಗಳ ನಿಷೇಧ

* ಮುಂದಿನ 10 ದಿನಗಳ ಕಾಲ ಡೀಸೆಲ್‌ ಜನರೇಟರ್‌ ಸ್ಥಗಿತ

* ನವೆಂಬರ್‌ 10ರಿಂದ ದೆಹಲಿಯ ರಸ್ತೆಗಳ ವ್ಯಾಕ್ಯೂಮ್‌ ಕ್ಲೀನಿಂಗ್‌

* ದೆಹಲಿಯ ರಸ್ತೆಗಳಲ್ಲಿ ದೂಳು ಏಳದಂತೆ ಸೋಮವಾರದಿಂದ ನೀರು ಎರೆಚುವುದು

* ಅಗತ್ಯಬಿದ್ದರೆ ಸಮ- ಬೆಸ ಸಂಚಾರ ವ್ಯವಸ್ಥೆ ಜಾರಿಗೆ

Comments are closed.