ರಾಷ್ಟ್ರೀಯ

ಕೇಜ್ರಿವಾಲ್‌ ಬಂಧನ: ಬಿಜೆಪಿಯ ಕೀಳು ರಾಜಕೀಯ ಎಂದ ಮಮತಾ

Pinterest LinkedIn Tumblr

mamata-banarjiಕೋಲ್ಕತಾ: ಒನ್‌ ರ್ಯಾಂಕ್ ಒನ್ ಪೆನ್ಶನ್‌ಗಾಗಿ ಆತ್ಮಹತ್ಯೆ ಮಾಡಿಕೊಂಡ ಯೋಧನ ಕುಟುಂಬದ ಸದಸ್ಯರ ಭೇಟಿಗೆ ತೆರಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗರಂ ಆಗಿದ್ದಾರೆ.

ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್, ಯೋಧನ ಕುಟುಂಬದವರನ್ನು ಭೇಟಿ ಮಾಡುವುದು ತಪ್ಪೇ? ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮೋದಿಯವರ ಆದೇಶದಂತೆ ದೆಹಲಿ ಪೊಲೀಸರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಬಿಜೆಪಿಗೆ ಮುಂಬರುವ ಚುನಾವಣೆಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

ಒಬ್ಬ ಮುಖ್ಯಮಂತ್ರಿಯನ್ನು ಅವರದ್ದೇ ರಾಜ್ಯದಲ್ಲಿ ಬಂಧಿಸುವಂತಹ ರಾಜಕೀಯ ನಾನು ದೇಶದ ಇತಿಹಾಸದಲ್ಲಿ ನೋಡಿಯೇ ಇಲ್ಲ. ದೆಹಲಿ ಪೊಲೀಸರ ವರ್ತನೆ ಮಿತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಪಕ್ಷವೊಂದರ ಉಪಾಧ್ಯಕ್ಷರಾದ ರಾಹುಲ್ ಗಾಂಧಿಯವರಿಗೆ ಕೂಡಾ ಕುಟುಂಬದ ಸದಸ್ಯರಿಗೆ ಭೇಟಿ ಮಾಡಲು ಅವಕಾಶ ಕೊಡದೆ ಬಂಧನಕ್ಕೊಳಗಾಗಿಸಿರುವುದು ಪ್ರಜಾಪ್ರಭುತ್ವಕ್ಕೆ ಮಸಿ ಬಳೆದಂತಾಗಿದೆ ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

Comments are closed.