ರಾಷ್ಟ್ರೀಯ

ಮೃತ ಯೋಧನ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ಘೋಷಿಸಿದ ಕೇಜ್ರಿವಾಲ್

Pinterest LinkedIn Tumblr

aravind-kejriwalಭಿವಾನಿ(ಹರಿಯಾಣಾ): ಒಆರ್‌ಒಪಿ ಜಾರಿಗೊಳಿಸುವಂತೆ ಒತ್ತಾಯಿಸಿ ಆತ್ಮಹತ್ಯೆಗೆ ಶರಣಾಗಿದ್ದ ನಿವೃತ್ತ ಯೋಧನ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 1 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.

ಹುತಾತ್ಮನೆಂದು ನಾವು ಕರೆಯುವ ರಾಮಕಿಶನ್ ಗೆರ್ವಾಲ್ ಕುಟುಂಬಕ್ಕೆ 1 ಕೋಟಿ ರೂ ಹಣಕಾಸಿನ ನೆರವು ನೀಡಲಾಗುವುದು ಎಂದು ಕುಟುಂಬದ ಸದಸ್ಯರ ಮುಂದೆ ಕೇಜ್ರಿವಾಲ್ ಘೋಷಿಸಿದರು.

ದೇಶಕ್ಕಾಗಿ ಬದುಕ್ಕಿದ್ದೆ ದೇಶಕ್ಕಾಗಿ ಸಾವನ್ನಪ್ಪುತ್ತಿದ್ದೇನೆ ಎನ್ನುವ ನಿವೃತ್ತ ಯೋಧ ರಾಮಕಿಶನ್ ಗೆರ್ವಾಲ್ ಅವರ ಹೇಳಿಕೆ ಯಾವುದೇ ಹುತಾತ್ಮ ಯೋಧನಿಗಿಂತ ಕಡಿಮೆಯಲ್ಲ ಎಂದು ತಿಳಿಸಿದ್ದಾರೆ.

ಇದೀಗ ಸಂಪೂರ್ಣ ದೇಶವೇ ಒಆರ್‌ಒಪಿ ಜಾರಿಗೊಳಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದೆ. ನಾವು ಕೂಡಾ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದು ಹೇಳಿದ್ದಾರೆ.

ನಿನ್ನೆ ನಿವೃತ್ತ ಯೋಧ ರಾಮಕಿಶನ್ ಗೆರ್ವಾಲ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೆರಳಿದ್ದಾಗ ದೆಹಲಿ ಪೊಲೀಸರು ಅವರನ್ನು ಬಂಧಿಸಿ ಏಳು ಗಂಟೆಗಳ ಕಾಲ ಬಂಧನಕ್ಕೊಳಗಾಗಿಸಿತ್ತು.

ಆತ್ಮಹತ್ಯೆಗೆ ಶರಣಾದ ನಿವೃತ್ತ ಯೋಧನ ಪುತ್ರ ಜಸ್ವಂತ್ ಮಾತನಾಡಿ, ದೆಹಲಿ ಪೊಲೀಸರು ಅಸಭ್ಯವಾಗಿ ವರ್ತಿಸಿದ್ದಲ್ಲದೇ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

Comments are closed.