ರಾಷ್ಟ್ರೀಯ

₹3 ಸಾವಿರ ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ: ಬಾಲಿವುಡ್‌ ನಿರ್ಮಾಪಕನ ಬಂಧನ

Pinterest LinkedIn Tumblr

drugsನವದೆಹಲಿ: ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಅತಿ ದೊಡ್ಡ ಪ್ರಮಾಣದ ನಿಷೇಧಿತ ಮಾದಕ ವಸ್ತು ಒಳಗೊಂಡ ಸರಕನ್ನು ಜಪ್ತಿ ಮಾಡಿದೆ.

ಉದಯ್‌ಪುರದ ಕಾರ್ಖಾನೆಯೊಂದರಲ್ಲಿ ₹3000 ಕೋಟಿ ಮೌಲ್ಯದ ನಿಷೇಧಿತ ಔಷಧಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಿರ್ಮಾಪಕ ಸುಭಾಷ್‌ ದುಧಾನಿ ಬಂಧನಕ್ಕೆ ಒಳಗಾಗಿದ್ದಾರೆ. ಅಕ್ಟೋಬರ್ 28ರಂದು ಡಿಆರ್‌ಐ ಅಧಿಕಾರಿಗಳು ಉದಯ್‌ಪುರದ ಮರುಧಾರ್‌ ಡ್ರಿಂಕ್ಸ್‌ ಮೇಲೆ ನಡೆಸಿದ ದಾಳಿಯಲ್ಲಿ ಕೋಣೆಯಲ್ಲಿ ಸಂಗ್ರಹಿಸಲಾಗಿದ್ದ ನಿಷೇಧಿತ ‘ಮ್ಯಾನ್‌ಡ್ರಾಕ್ಸ್‌’ ಮಾತ್ರೆಗಳನ್ನು ಪತ್ತೆ ಮಾಡಲಾಗಿತ್ತು.

ಒಟ್ಟು 23.5 ಮೆಟ್ರಿಕ್‌ ಟನ್ ತೂಕವಿರುವ ಸರಕು, ಅಂದಾಜು 2 ಕೋಟಿ ಮಾತ್ರೆಗಳನ್ನು ಒಳಗೊಂಡಿದೆ. ಈ ಮಾತ್ರೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ₹3 ಸಾವಿರ ಕೋಟಿಯಷ್ಟಿದೆ. ಇದು ಡಿಆರ್‌ಐ ನಡೆಸಿರುವ ಈವರೆಗಿನ ಅತಿ ದೊಡ್ಡ ಕಾರ್ಯಾಚರಣೆಯಾಗಿದೆ ಎಂದು ಕೇಂದ್ರೀಯ ಅಬಕಾರಿ ಮತ್ತು ಸೀಮಾ ಶುಲ್ಕ ಮಂಡಳಿ ಮುಖ್ಯಸ್ಥ ನಜೀಬ್‌ ಷಾ ತಿಳಿಸಿದರು.

ಗಡಿ ಭದ್ರತಾ ಪಡೆಯ ಸಹಕಾರದೊಂದಿಗೆ ಡಿಆರ್‌ಐ ಮುಂಬೈ ಮಾಹಿತಿ ಪಡೆದು ಮಾದಕವಸ್ತು ಜಾಲದ ಪ್ರಮುಖ ಬಾಲಿವುಡ್ ನಿರ್ಮಾಪಕ ಸುಭಾಷ್‌ ದುಧಾನಿಯನ್ನು ಬಂಧಿಸಲಾಗಿದೆ. ವಶಪಡಿಸಿಕೊಳ್ಳಲಾಗಿರುವ ಸರಕನ್ನು ರಾಜಸ್ತಾನದಲ್ಲಿ ಉತ್ಪಾದಿಸಲಾಗಿದ್ದು, ಮೊಜಾಂಬಿಕ್‌ ಅಥವಾ ದಕ್ಷಿಣ ಆಫ್ರಿಕಾ ಗಳಿಗೆ ರವಾನಿಸಲಾಗುತ್ತಿತ್ತು ಎಂದರು.

ಕಳೆದ ಐದು ವರ್ಷಗಳಲ್ಲಿ ಡಿಆರ್‌ಐ 540 ಕೆ.ಜಿ. ಹೆರಾಯಿನ್‌ ಹಾಗೂ 7,409 ಕೆ.ಜಿ. ಎಫೆಡ್ರಿನ್‌ ಸೇರಿದಂತೆ ಮತ್ತು ಸಂಮೋಹನ ಮತ್ತು ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ.

ನಿಷೇಧಿತ ಮ್ಯಾನ್‌ಡ್ರಾಕ್ಸ್‌
ಮ್ಯಾನ್‌ಡ್ರಾಕ್ಸ್‌, ಎಂ–ಪಿಲ್ಸ್‌, ಬಟನ್ಸ್‌ ಅಥವಾ ಸ್ಮಾರ್ಟೀಸ್‌ ಎಂದೆಲ್ಲ ಕರೆಸಿಕೊಳ್ಳುವ ಮಾತ್ರೆಗಳಲ್ಲಿ ಗಾಂಜಾದಂತಹ ವಸ್ತುಗಳ ಮಿಶ್ರಣವಿರುತ್ತದೆ. ಆಫ್ರಿಕಾ ಮತ್ತು ಏಷ್ಯಾ ಭಾಗಗಳಲ್ಲಿ ಮನರಂಜನೆಯ ಡ್ರಗ್‌ ಆಗಿ ಬಳಕೆಯಾಗುತ್ತಿದೆ.

Comments are closed.