Photo : Ashok Belman
ದುಬೈ: ದುಬಾಯಿಯ ಇನ್ವೆಸ್ಟ್ಮೆಂಟ್ ಪಾರ್ಕ್ ನಲ್ಲಿ ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ – ಪ್ರವೀಣ್ ಶೆಟ್ಟಿ ಎಂಟಪ್ರ್ರೈಸಸ್ ನ 8ನೇ ಸುಸಜ್ಜಿತ ವಿಶ್ವದರ್ಜೆಯ ” ಫೋರ್ಚುನ್ ಪಾರ್ಕ್ ಹೋಟೆಲ್” ಬುಧವಾರ ಉದ್ಘಾಟನೆಗೊಂಡಿತು.
ದುಬಾಯಿ ಸುಂದರ ತಾಣದಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ತಲೆ ಎತ್ತಿ ನಿಂತಿರುವ ನಾಲ್ಕು ನಕ್ಷತ್ರ ದರ್ಜೆಯ(4 ಸ್ಟಾರ್) ಫಾರ್ಚೂನ್ ಪಾರ್ಕ್ ಹೋಟೆಲ್ ವಕ್ವಾಡಿ ಪ್ರವೀಣ್ ಶೆಟ್ಟಿಯವರ ಕನಸಿನ ಕಲ್ಪನೆಯ ಸೌಧವಾಗಿದ್ದು, ಇದನ್ನು ಬುಧವಾರ ಗಣ್ಯಾತಿಗಣ್ಯರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.
ಅಜ್ಮಾನ್ ಆಡಳಿತ ಕುಟುಂಬದ ಸದಸ್ಯ ಶೇಖ್ ಸುಲ್ತಾನ್ ಅಲಿ ರಾಶಿದ್ ನೊವೊಮಿ, ಎನ್‌ಎಂಸಿ ಮತ್ತು ಯುಎಇ ಎಕ್ಸ್‌ಚೇಂಜ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಬಿ.ಆರ್. ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದುಬೈ ACME ಬಿಲ್ಡಿಂಗ್ ಮೆಟೀರಿಯಲ್ಸ್ ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್ , ಉದ್ಯಮಿಗಳಾದ ರಾಜ್ ಶೆಟ್ಟಿ, ವಿ.ಕೆ.ಮೋಹನ್, ಹೋಟೆಲ್ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಅವರ ಧರ್ಮ ಪತ್ನಿ ರೂಪಾಲಿ ಪ್ರವೀಣ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ ಮೊದಲಾದವರ ಗಣ್ಯ ಸಮ್ಮುಖದಲ್ಲಿ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಅಮೇರಿಕಾದ ಪ್ರಖ್ಯಾತ ವಾಸ್ತು ಶಿಲ್ಪಿ ರೆಝಾ ಕಾಬುಲ್ ತಮ್ಮ ವಿಶಿಷ್ಟ ವಿನ್ಯಾಸದಲ್ಲಿ ಫಾರ್ಚೂನ್ ಪಾರ್ಕ್ ಹೋಟೆಲ್ ರೂಪುಗೊಂಡಿದೆ. ನಾಲ್ಕು ದಿಕ್ಕಿನಲ್ಲಿಯೂ ವಿಹಂಗಮ ದೃಶ್ಯವಿರುವ ಸುಸಜ್ಜಿತ ಸಕಲ ಸೌಕರ್ಯದೊಂದಿಗೆ ಪ್ರವಾಸಿಗರಿಗೆ ಹತ್ತಿರದಲ್ಲೇ ಮಕ್ತೂಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜೆಬೆಲ್ ಅಲಿ ಫ್ರೀಜೋನ್, 2020ರ ರ ಎಕ್ಸ್ ಪೋ ಕೇಂದ್ರ ವಾಣಿಜ್ಯ, ಉದ್ಯಮಿಗಳು ವ್ಯವಹಾರಕ್ಕೆ ದುಬಾಯಿಗೆ ಆಗಮಿಸಿದರೆ ಎಲ್ಲಾ ಸೌಕರ್ಯ ಒಂದೆಡೆ ದೊರೆಯುವ ತಂಗುದಾಣವಾಗಿದೆ.
ಅತ್ಯಂತ ಆಕರ್ಷಕ ಒಳಾಂಗಣ ವಿನ್ಯಾಸ ಪ್ರತಿಯೊಬ್ಬರನ್ನು ತನ್ನೆಡೆಗೆ ಸೆಳೆಯುವಂತಿದೆ. ವಿಶಾಲ ಕೊಠಡಿ, ವೈವಿಧ್ಯಮಯ ವರ್ಣ ಸಂಯೋಜನೆ, ಅತ್ಯಾಧುನಿಕ ಪಿಠೋಪಕರಣ, ತೈಲವರ್ಣ, ಜಲವರ್ಣ ಚಿತ್ರಗಳು ಒಳಾಂಗಣದ ಅಕರ್ಷಣೆಯನ್ನು ಹಿಮ್ಮಡಿಗೊಳಿಸಿದೆ.
ಫಾರ್ಚೂನ್ ಗ್ರೂಪ್ ನ ವಿಖ್ಯಾತ “ಫ್ರೆಡ್ಡಿಸ್” ರುಚಿರುಚಿಯಾದ ಭಕ್ಷ್ಯ ಭೋಜನ ಸವಿಯುವವರನ್ನು ತನ್ನೆಡೆಗೆ ಸೆಳೆಯಲು ಸಜ್ಜಾಗಿದೆ. ಸ್ಪೋಟ್ರ್ಸ್ ಬಾರ್ 24/7ರ, ಲೈವ್ ಬಾಂಗ್ರಾ, ದೇಶಿ ಡಾಬಾ, ಗಾರ್ಡನ್ ರೂಫ್ ಟಾಪ್ ರೆಸ್ಟೊರೆಂಟ್, ಶಿಶಾ ಲಾಂಜ್, ಸ್ವಿಮಿಂಗ್ ಫೂಲ್, ಮೀಟಿಂಗ್ ರೂಮ್, ಇನ್ನಿತರ ಹತ್ತು ಹಲವು ಸೌಲಭ್ಯವಿರುವ ಪ್ರತಿಷ್ಠಿತ ಹೋಟೆಲ್ ದುಬಾಯಿಯ ಸೌಂದರ್ಯಕ್ಕೆ ಇನ್ನೊಂದು ಗರಿ ಸೇರ್ಪಡೆಯಾದಂತಿದೆ.