ಕ್ರೀಡೆ

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌: ಇಶಾಂತ್‌, ಪಾಂಡ್ಯಗೆ ಸ್ಥಾನ

Pinterest LinkedIn Tumblr
India's  wicket keeper Vruddhiman Saha  being congratulated by Murali Vijay, Ravindra Jadeja and Virat Kolhi after taking the  catch of South Africa's AB de Villiers of Ravindra Jadeja   in the 1st innings of the  1st test match on the 1st day play at Chinnaswamy Stadium in Bengaluru on Saturday. Photo Srikanta Sharma R.
In

ಮುಂಬೈ: ಇಂಗ್ಲೆಂಡ್‌ ವಿರುದ್ಧ ನವೆಂಬರ್‌ 9 ರಿಂದ ಆರಂಭವಾಗಲಿರುವ ಟೆಸ್ಟ್‌ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ 15 ಜನ ಆಟಗಾರರ ಭಾರತ ತಂಡವನ್ನು ಬುಧವಾರ ಪ್ರಕಟಿಸಿದೆ.

ಹಿರಿಯ ವೇಗದ ಬೌಲರ್‌ ಇಶಾಂತ್‌ ಶರ್ಮಾ ಮತ್ತೆ ತಂಡಕ್ಕೆ ಮರಳಿದ್ದಾರೆ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹಾಗೂ ಜಯಂತ್ ಯಾದವ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದ ಹೊಸ ಮುಖಗಳು.

ನ್ಯೂಜಿಲೆಂಡ್‌ ವಿರುದ್ಧ ಗಮನಾರ್ಹ ಪ್ರದರ್ಶನ ನೀಡದ ಗೌತಮ್‌ ಗಂಭೀರ್‌ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಭಾರತ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ) ಗೌತಮ್ ಗಂಭೀರ್, ಮುರಳಿ ವಿಜಯ್, ವೃದ್ಧಿಮಾನ್ ಸಾಹಾ ( ಕೀಪರ್‌), ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಮಿತ್ ಮಿಶ್ರಾ, ಮೊಹಮ್ಮದ್ ಶಮಿ, ಕರುಣ್ ನಾಯರ್, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಮತ್ತು ಜಯಂತ್ ಯಾದವ್

Comments are closed.