ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಬಂಧಿತನಾಗಿರುವ ಪಾಕ್ ಹೈಕಮಿಷನ್ ಸಿಬ್ಬಂದಿ ಮೆಹಮೂದ್ ಅಖ್ತರ್ ಭಾರತ ಬಿಡುವ ಮುನ್ನ ನವದೆಹಲಿಯಲ್ಲಿ ಪಾಕಿಸ್ತಾನದ ಗೂಢಚಾರ ಸಂಸ್ಥೆ (ಐಎಸ್‍ಐ)ಗಾಗಿ ಕಾರ್ಯ ನಿರ್ವಹಿಸುತ್ತಿರುವ 10 ಮಂದಿಯ ಹೆಸರನ್ನು ಬಹಿರಂಗ ಪಡಿಸಿದ್ದಾನೆ.
ಸಿಎನ್‍ಎನ್- ನ್ಯೂಸ್ 18 ವರದಿ ಪ್ರಕಾರ ಅಖ್ತರ್ ಅವರು, ಕರ್ನಲ್ ಸಯ್ಯದ್ ಫರೂಖ್, ಅವರ ಸಹಾಯಕ ಅಧಿಕಾರಿ ಖದೀಮ್ ಹುಸೈನ್, ಮೇಜರ್ ಸಹೀದ್ ಇಕ್ಬಾಲ್ ಮತ್ತು ಡೆಪ್ಯುಟಿ ಡೈರೆಕ್ಟರ್ ಡಾ. ಮುದಾಸಿರ್ ಇಕ್ಬಾಲ್ ಮೊದಲಾದ ಐಎಸ್ಐ ಅಧಿಕಾರಿಗಳ ಹೆಸರುಗಳನ್ನು ಬಹಿರಂಗ ಪಡಿಸಿದ್ದಾನೆ. ಈ ವ್ಯಕ್ತಿಗಳು ಐಎಸ್ಐ ಅಥವಾ ಸೇನೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಯೇ? ಎಂದು ಕೇಳಿದಾಗ, ಅವರ ಕೆಲಸಗಳು ಬದಲಾಗುತ್ತಲೇ ಇರುತ್ತದೆ ಎಂದು ಆತ ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ
ಪಾಕ್ ಗೂಢಚಾರನೊಂದಿಗೆ ನಂಟು ಆರೋಪ; ಸಮಾಜವಾದಿ ಪಕ್ಷ ನಾಯಕನ ಆಪ್ತ ವಶಕ್ಕೆ
ಅಖ್ತರ್ ಅವರನ್ನು ಭಾರತದಲ್ಲಿ ಇರಿಸಿಕೊಳ್ಳಲು ‘ಸಮ್ಮತಿ ಇಲ್ಲ’ (persona non-grata) ಎಂಬ ಕಾರಣದಿಂದ ಆತನನ್ನು ಶನಿವಾರ ಬೆಳಗ್ಗೆಯೇ ಕಳುಹಿಸಿಕೊಡಲಾಗಿದೆ. ಅಖ್ತರ್ ಅವರ ಕುಟುಂಬದ ಮೂವರು ಸದಸ್ಯರು ಅಮೃತಸರದಲ್ಲಿರುವ ಅತ್ತಾರಿ ಎಂಬಲ್ಲಿಗೆ ಬಂದಿದ್ದು ಅವರೆಲ್ಲರನ್ನೂ ಬೆಳಗ್ಗೆ 11 ಗಂಟೆಗೆ ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ.
Comments are closed.