ಕರ್ನಾಟಕ

ಉಕ್ಕಿನ ಸೇತುವೆಗೆ ಕಾಗೋಡು ಸಮರ್ಥನೆ

Pinterest LinkedIn Tumblr

kagoduಬೆಂಗಳೂರು: ರಾಜ್ಯದ ಬರ ಪರಿಹಾರಕ್ಕೆ ರು. 3733 ಕೋಟಿ ನೆರವು ನೀಡಬೇಕೆಂದು ಮನವಿ ಮಾಡಿದ್ದು, ಇದಕ್ಕೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ನ.2 ರಂದು ಅಧ್ಯಯನ ತಂಡ ಬರಲಿದೆ.

ಬರಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ 110 ತಾಲೂಕು ಬರಪೀಡಿತ ಅಂತ ಘೋಷಣೆ ಮಾಡಿದ್ದು, ಇನ್ನೂ 29 ತಾಲ್ಲೂಕು ಬರಪೀಡಿತ ಎಂದು ಗುರುತು ಮಾಡಲಾಗಿದೆ.

ಕೆಲವೆಡೆ ಅತಿವೃಷ್ಟಿಯಿಂದ ಹಾನಿಯಾಗಿದೆ.ಇದಕ್ಕಾಗಿ ರು.386 ಕೋಟಿ ಪರಿಹಾರ ಕೇಳಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಕೇಂದ್ರ ತಂಡದಲ್ಲಿ ಮೂರು ಗುಂಪುಗಳು ಇರುತ್ತವೆ. ಪ್ರತ್ಯೇಕವಾಗಿ ತಂಡ ರಾಜ್ಯ ಪ್ರವಾಸ ಮಾಡಲಿದೆ. ಕೇಂದ್ರ ತಂಡ ಬಂದಾಗ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಬರ ಕಾಮಗಾರಿಗೆ ಈಗಾಗಲೇ 360 ಕೋಟಿ ಹಣವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದೆ.

ಉಕ್ಕಿನ ಸೇತುವೆ ಸಮರ್ಥಿಸಿದ ಕಾಗೋಡು ತಿಮ್ಮಪ್ಪ

ಉಕ್ಕಿನ ಸೇತುವೆ ನಿರ್ಮಾಣವಾದರೆ ಜನರಿಗೆ ಅನುಕೂಲ ಎಂದು ಹೇಳಿದ ತಿಮ್ಮಪ್ಪ ಪ್ರತಿಪಕ್ಷಗಳು ವಿರೋಧ ಮಾಡೋಕೆ ಇರೋದು ಎಂದಿದ್ದಾರೆ. ಆಗ ಭೂಸುಧಾರಣೆ ಕಾಯ್ದೆ ತಂದಾಗಲೂ ವಿರೋಧ ಬಂದಿತ್ತು. ದೇವೇಗೌಡರು ವಿರೋಧ ಮಾಡಿದಾಗ ನಾನೇ ಉತ್ತರ ಕೊಟ್ಟ ದಾಖಲೆ ಇದೆ.

ಲಿಂಗನಮಕ್ಕಿ ಡ್ಯಾಂ ಕಟ್ಟುವಾಗ ಗ್ರೀನ್ ಬೇಂಚ್ ಇರಲಿಲ್ಲ. ಇದ್ದಿದ್ದರೆ ಡ್ಯಾಂ ಆಗ್ತಾ ಇರಲಿಲ್ಲ. ಊರು ಬಂಗಾರದಂತ ಕಾಡು ಮುಳುಗಿತ್ತಿರಲಿಲ್ಲ. ಜನ ಊರು ಬಿಡೋದು ತಪ್ತಿತ್ತು …ಈಗಲೂ ಓಡ್ತಾನೇ ಇದಾರೆ ಎಂದು ಉಕ್ಕಿನ ಸೇತುವೆ ನಿರ್ಮಾಣದ ಬಗ್ಗೆ ವಿಮರ್ಶಕ ದೃಷ್ಟಿಯಿಂದ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯಿಸಿದ್ದಾರೆ.

Comments are closed.