ರಾಷ್ಟ್ರೀಯ

ನಾನು ಸತ್ತರೆ ಅಳಬೇಡಿ ಅಂದಿದ್ದ ಗುರ್ನಾಮ್ ಸಿಂಗ್

Pinterest LinkedIn Tumblr

gurnam-singhಜಮ್ಮು: ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಹಿರಾನಗರ್ ಪ್ರದೇಶದಲ್ಲಿ ಶುಕ್ರವಾರ ನಡೆದ ಪಾಕ್- ಭಾರತ ಸೇನಾಪಡೆ ನಡುವಿನ ಗುಂಡಿನ ಚಕಮಕಿಯಲ್ಲಿ ತೀವ್ರ ಗಾಯಗೊಂಡಿದ್ದ ಬಿಎಸ್ಎಫ್ ಯೋಧ ಗುರ್ನಾಮ್ ಸಿಂಗ್ ಹುತಾತ್ಮರಾಗಿದ್ದಾರೆ.

ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡ ಸಿಂಗ್ 28ರ ಹರೆಯದ ಸಿಂಗ್ ಅವರನ್ನು ಜಮ್ಮುನಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿಂಗ್ ಶನಿವಾರ ವೀರಮರಣವನ್ನಪ್ಪಿದ್ದಾರೆ.

ನಾನು ಅಳುವುದಿಲ್ಲ: ಒಂದು ವೇಳೆ ನಾನು ಸತ್ತರೆ, ನನಗಾಗಿ ಅಳಬೇಡಿ ಎಂದು ಮಗ ಹೇಳಿದ್ದ, ನಾನು ಅಳುವುದಿಲ್ಲ. ದೇಶಕ್ಕಾಗಿ ಪ್ರಾಣತೆತ್ತ ಯೋಧರ ಬಗ್ಗೆ ನನಗೆ ಹೆಮ್ಮೆಯಿದೆ. ಗಾಯಗೊಂಡ ಅವನಿಗೆ ಉತ್ತಮ ಚಿಕಿತ್ಸೆ ನೀಡಬೇಕಾಗಿತ್ತು ಎಂದು ಸಿಂಗ್ ಅವರ ಅಮ್ಮ ಹೇಳಿದ್ದಾರೆ.

ಗಾಯಗೊಂಡ ನನ್ನ ಮಗನನ್ನು ಬಕ್ಸಿ ನಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವೇಳೆ ಬಿಎಸ್ಎಫ್ ನವರಿಗೆ ಸ್ವಂತ ಆಸ್ಪತ್ರೆ ಮತ್ತು ವೈದ್ಯರು ಇದ್ದಿದ್ದರೆ ನನ್ನ ಮಗನನ್ನು ಬದುಕುಳಿಸಬಹುದಾಗಿತ್ತು, ನಮ್ಮ ಯೋಧರಿಗಾಗಿ ಉತ್ತಮ ಆಸ್ಪತ್ರೆಯನ್ನು ಕಲ್ಪಿಸಿ ಎಂದು ಸಿಂಗ್ ಅವರ ಅಪ್ಪ ಕುಲ್ಬೀರ್ ಸಿಂಗ್ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.

Comments are closed.