ರಾಷ್ಟ್ರೀಯ

ಸಂಚಾರಿ ಪೊಲೀಸರ ನೋಟಿಸ್‌ನಿಂದ ವಿವಾಹೇತರ ಸಂಬಂಧದ ಗುಟ್ಟು ರಟ್ಟು

Pinterest LinkedIn Tumblr

sancharaಅಹಮದಾಬಾದ್‌ : ಸಂಚಾರಿ ಪೊಲೀಸರು ಕೊಟ್ಟ ನೋಟಿಸ್‌ನಿಂದ ವಿವಾಹಿತ ವ್ಯಕ್ತಿಯೊಬ್ಬರು ಹೊಂದಿದ್ದ ವಿವಾಹೇತರ ಸಂಬಂಧದ ಗುಟ್ಟು ರಟ್ಟಾದ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಅಹಮದಾಬಾದ್‌ನ ಗೋಮತಿ ಪುರದ ನಿವಾಸಿ ಕೃಷ್ಣ (ಹೆಸರು ಬದಲಿಸಲಾಗಿದೆ) ಅವರ ವಿವಾಹೇತರ ಸಂಬಂಧ ಬಹಿರಂಗಗೊಂಡು ಪೊಲೀಸರ ಎದುರೇ ಪತ್ನಿ ಕಡೆಯಿಂದ ಗೂಸಾ ತಿಂದಿದ್ದಾರೆ.

ಘಟನೆಯ ವಿವರ: ಕೃಷ್ಣ ಎಂಬುವರು ಅಹಮದಾಬಾದ್‌ನ ಗೋಮತಿ ಪುರದಲ್ಲಿ ಪತ್ನಿಯ ಜೊತೆ ವಾಸವಾಗಿದ್ದಾರೆ. ಒಮ್ಮೆ ತಮ್ಮ ಗರ್ಲ್‌ ಫ್ರೆಂಡ್‌ ಜೊತೆ ಬೈಕ್‌ನಲ್ಲಿ ಸುತ್ತಾಡಿದ್ದಾರೆ. ಹಿಂಬದಿ ಕುಳಿತ್ತಿದ್ದ ಗರ್ಲ್‌ ಫ್ರೆಂಡ್‌ ಹೆಲ್ಮೆಟ್‌ ಧರಿಸಿರಲಿಲ್ಲ! ಇದನ್ನು ಗಮನಿಸಿದ್ದ ಸಂಚಾರ ಪೊಲೀಸರು ಅವರು ಬೈಕ್‌ನಲ್ಲಿ ಕುಳಿತಿರುವುದನ್ನು ಫೋಟೊ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದರು.

ಘಟನೆ ನಡೆದು ಒಂದು ತಿಂಗಳ ಬಳಿಕ ಕೃಷ್ಣ ಅವರ ಮನೆಗೆ ಸಂಚಾರ ಪೊಲೀಸರು ಹೆಲ್ಮೆಟ್‌ ಇಲ್ಲದೇ ಪ್ರಯಾಣಿಸಿದ್ದಕ್ಕೆ ದಂಡ ಕಟ್ಟುವಂತೆ ನೋಟಿಸ್‌ ಕಳುಹಿಸಿದ್ದರು. ಪೊಲೀಸರು ಬರೀ ನೋಟಿಸ್‌ ಕಳುಹಿಸಿದ್ದರೆ ಪರವಾಗಿರಲಿಲ್ಲ! ಅದರ ಜತೆಯಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಪೋಟೊವನ್ನು ಲಗತ್ತಿಸಿದ್ದರು. ಇದರಿಂದ ಕೋಪಗೊಂಡ ಕೃಷ್ಣ ಅವರ ಪತ್ನಿ ಪೊಲೀಸರ್‌ ಠಾಣೆಗೆ ತೆರಳಿ ಆ ಹುಡಗಿ ಯಾರು ಎಂಬುದನ್ನು ಪತ್ತೆ ಹಚ್ಚಿಕೊಡುವಂತೆ ದುಂಬಾಲು ಬಿದ್ದಿದ್ದಾರೆ.

ವಿಷಯ ತಿಳಿದ ಕೃಷ್ಣ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಠಾಣೆಗೆ ಬಂದಿದ್ದಾರೆ. ಈ ವೇಳೆ ಪೊಲೀಸರ ಎದುರಿನಲ್ಲೇ ಪತ್ನಿ ಕೃಷ್ಣನಿಗೆ ಥಳಿಸಿದ್ದಾರೆ. ಅಂತಿಮವಾಗಿ ಪೊಲೀಸರ ರಾಜಿ ಮಾಡಿ ದಂಪತಿಗಳನ್ನು ಮನೆಗೆ ಕಳುಹಿಸಿದ್ದಾರೆ.

‌‌ಟ್ರಾಫಿಕ್‌ ಸಿಗ್ನಲ್‌ಗಳನ್ನು ಉಲ್ಲಂಘನೆ ಮಾಡುವುದರಿಂದಲೂ ಗುಟ್ಟುಗಳು ರಟ್ಟಾಗುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Comments are closed.