ರಾಷ್ಟ್ರೀಯ

ಸ್ಮೃತಿ ಇರಾನಿಗೆ ‘ಕಿರುಕುಳ’ ನೀಡುವುದಕ್ಕೆ ನಕಲಿ ಡಿಗ್ರಿ ಪ್ರಕರಣ: ದಿಲ್ಲಿ ಹೈಕೋರ್ಟ್

Pinterest LinkedIn Tumblr

smrutiನವದೆಹಲಿ: ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಕಿರುಕುಳ ನೀಡುವ ಸಲುವಾಗಿಯೇ ನಕಲಿ ಡಿಗ್ರಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ದೆಹಲಿ ನ್ಯಾಯಾಲಯ ಹೇಳಿದೆ.

ಸ್ಮೃತಿ ಇರಾನಿಯವರ ವಿದ್ಯಾರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸ್ಮೃತಿ ಅವರು ಕೇಂದ್ರ ಸಚಿವೆ ಆಗಿಲ್ಲದೇ ಇರುತ್ತಿದ್ದರೆ ಇಂಥಾ ಪ್ರಕರಣ ದಾಖಲಾಗುತ್ತಿರಲಿಲ್ಲ. ಶೈಕ್ಷಣಿಕ ಅರ್ಹತೆಯ ದಾಖಲೆ ಈಗಾಗಲೇ ನಾಪತ್ತೆಯಾಗಿದೆ. ಇದಕ್ಕೆ ಪೂರಕವಾಗಿ ನೀಡಿದ ಸಾಕ್ಷ್ಯಗಳು ಸಾಕಾಗುವುದಿಲ್ಲ ಎಂದು ಹೇಳಿದ ಮೆಟ್ರೊಪಾಲಿಟನ್ ಮೆಜಿಸ್ಟ್ರೇಟರ್ ಹರ್ವಿಂದರ್ ಸಿಂಗ್ ಅರ್ಜಿಯನ್ನು ತಳ್ಳಿಹಾಕಿದ್ದಾರೆ.

ಆದಾಗ್ಯೂ, ಸಚಿವೆಯ ವಿದ್ಯಾರ್ಹತೆ ಪ್ರಶ್ನಿಸಲು 11 ವರ್ಷಗಳೇ ಬೇಕಾಯಿತು ಎಂದು ಸಿಂಗ್ ಹೇಳಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಅಹ್ಮದ್ ಖಾನ್ ಎಂಬವರು ಸ್ಮೃತಿ ಇರಾನಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಪ್ರಶ್ನೆ ಎತ್ತಿದ್ದರು, ಚುನಾವಣೆ ವೇಳೆ ಸ್ಮೃತಿಯವರು ಸಲ್ಲಿಸಿದ ಅಫಿಡವಿಟ್ ನಲ್ಲಿ ಶೈಕ್ಷಣಿಕ ದಾಖಲೆಯನ್ನು ತಪ್ಪಾಗಿ ನಮೂದಿಸಲಾಗಿದೆ. ಇದು ಉದ್ದೇಶಪೂರ್ವಕ ತಪ್ಪು ಆಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.

Comments are closed.