ರಾಷ್ಟ್ರೀಯ

ಏರ್‌ಟೆಲ್ ನಿಂದ 4ಜಿ ಬಳಕೆದಾರರಿಗೆ 3 ತಿಂಗಳ ಉಚಿತ ಡೇಟಾ

Pinterest LinkedIn Tumblr

airtelನವದೆಹಲಿ: ದೇಶದ ಅತೀ ದೊಡ್ಡ ನೆಟ್‌ವರ್ಕ ಹೊಂದಿರುವ ಭಾರತೀಯ ಏರ್‌ಟೆಲ್ 4 ಜಿ ಬಳಕೆದಾರರಿಗೆ ಮೂರು ತಿಂಗಳ ಕಾಲ ಉಚಿತ ಡೇಟಾ ಸೇವೆ ನೀಡಲು ಮುಂದಾಗಿದೆ.

ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಎದುರಾದ ಹಿನ್ನೆಲೆಯಲ್ಲಿ ಎಲ್ಲಾ ಸಂಸ್ಥೆಗಳು ಕರೆ ಹಾಗೂ ಇಂಟರ್‌ನೆಟ್ ಸೇವೆಯ ದರವನ್ನು ಕಡಿತ ಮಾಡುತ್ತಿವೆ. ಈ ಬೆನ್ನಲ್ಲೆ ಏರ್‌ಟೆಲ್ ನೆಟ್‌ವರ್ಕ್ ಡೇಟಾ ಹಾಗೂ ಕರೆಗಳ ದರದಲ್ಲಿ ಭಾರಿ ಕಡಿತಗೊಳಿಸಲು ನಿರ್ಧರಿಸಿದೆ.

ಏರ್‌ಟೆಲ್ 4 ಜಿ ಗ್ರಾಹಕರು ಕೇವಲ 1495 ರೂಪಾಯಿಗಳ ರಿಚಾರ್ಜ್ ಮಾಡಿಕೊಳ್ಳುವ ಮೂಲಕ ಮೂರು ತಿಂಗಳ ಕಾಲ 30 ಜಿಬಿಯಷ್ಟು 4 ಜಿ ಡೇಟಾ ಸೇವೆ ತದನಂತರ ಅನಿಯಮಿತ ಇಂಟರ್‌ನೆಟ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

Comments are closed.