ರಾಷ್ಟ್ರೀಯ

ಇಲ್ಲಿ ಶೌಚಾಲಯವಿದ್ದರೆ ಮಾತ್ರ ಪಾಸ್‌ಪೋರ್ಟ್

Pinterest LinkedIn Tumblr

PASSPORTಭೋಪಾಲ್(ಅ.17): ಕೆಲ ವರ್ಷಗಳ ಹಿಂದೆ ಪಾಸ್‌ಪೋರ್ಟ್ ಪಡೆಯುವುದು ಸುಲಭವೇನಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅವುಗಳೂ ಸರಳಗೊಂಡಿವೆ. ಆದರೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಜನರಿಗೆ ಮಾತ್ರ ದೇಶದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ಸುಲಭವಾಗಿಲ್ಲ. ಜಿಲ್ಲೆಯವರು ಪಾಸ್‌ಪೋರ್ಟ್ ಪಡೆಯಬೇಕೆಂದಿದ್ದರೆ ಮನೆಯಲ್ಲಿ ಶೌಚಾಲಯ ಹೊಂದಿರಬೇಕು. ಇಂಥ ನಿಯಮವನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ ಎಂದು ‘ದ ಟೈಮ್ಸ್ ಆ್ ಇಂಡಿಯಾ’ ವರದಿ ಮಾಡಿದೆ.
ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಸ್ಥಳೀಯ ಠಾಣೆಯಿಂದ ವ್ಯಕ್ತಿಯ ಬಗ್ಗೆ ದೃಢೀಕರಣ ಪಡೆಯಬೇಕು. ಇದೇ ಸಂದ‘ರ್ದಲ್ಲಿ ದೃಢೀಕರಿಸಿದ ಪೊಲೀಸ್ ಕಾನ್‌ಸ್ಟೇಬಲ್ ಅರ್ಜಿದಾರನ ಮನೆಯಲ್ಲಿ ಶೌಚಾಲಯ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶುಕ್ರವಾರ ಕಟ್ನಿ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿತ್ತು. ‘ಸ್ವಚ್ಛ ಭಾರತ’ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಇಂಥ ನಿಯಮ ಜಾರಿಗೊಳಿಸಿದ್ದಾಗಿ ಜಿಲ್ಲಾಡಳಿತ ಹೇಳಿದೆ. ‘‘ಜಿಲ್ಲೆಯ ಶೇ.60 ಮನೆಗಳಲ್ಲಿ ಶೌಚಾಲಯ ಇಲ್ಲ. ಮಧ್ಯಪ್ರದೇಶವನ್ನು ಬಯಲು ಶೌಚ ಮುಕ್ತವಾಗಿಸಬೇಕೆಂದು ಈ ಕ್ರಮಕ್ಕೆ ಮುಂದಾಗಿದ್ದೇವೆ. ಹೀಗಾಗಿ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸಿದವರು ಶೌಚಾಲಯ ಇದೆ ಎಂದು ಸ್ಥಳೀಯ ಠಾಣೆಯಿಂದ ನಿರಾಕ್ಷೇಪಣಾ ಪತ್ರವನ್ನೂ ಸಲ್ಲಿಸಬೇಕು. ಇತರ ಇಲಾಖೆಗಳ ಜತೆ ಚರ್ಚಿಸಿ ನಿಯಮ ಜಾರಿಗೊಳಿಸಲಾಗಿದೆ,’’ ಜಿಲ್ಲಾಕಾರಿ ಗೌರವ್ ತಿವಾರಿ ತಿಳಿಸಿದ್ದಾರೆ.
ಆದರೆ, ಈ ನಿಯಮವನ್ನು ವಕೀಲರೊಬ್ಬರು ವಿರೋಧಿಸಿದ್ದು, ಇದು ‘ಮಾನವ ಹಕ್ಕಿನ’ ಉಲ್ಲಂಘನೆ ಎಂದಿದ್ದಾರೆ.
ಈ ನಡುವೆ ಪಟಾಕಿ ಮಾರಾಟಕ್ಕೆ ಆಕ್ಷೇಪಣೆ ಇಲ್ಲವೆಂಬ ಪ್ರಮಾಣಪತ್ರ (ಎನ್‌ಒಸಿ) ಬಯಸುವವರು, ಪೆಟ್ರೋಲ್ ಬಂಕ್ ಆರಂಭಿಸುವವರು ಹಾಗೂ ವರ್ತನೆ ಪ್ರಮಾಣ ಪತ್ರ ಪಡೆಯಲು ಇಚ್ಚಿಸುವವರ ಮನೆಯಲ್ಲಿ ಶೌಚಾಲಯ ಇರಬೇಕು. ಇಲ್ಲದಿದ್ದರೆ ನೀಡಲಾಗುವುದಿಲ್ಲ ಎಂದು ಪೊಲೀಸ್ ಅಕಾರಿ ಘೋಷಿಸಿದ್ದಾರೆ.

Comments are closed.