ರಾಷ್ಟ್ರೀಯ

ಕಾವೇರಿ ವಿವಾದ: ಸುಪ್ರೀಂಗೆ ಸಲ್ಲಿಸಿರುವ ಕೇಂದ್ರ ಅಧ್ಯಯನ ತಂಡದ ವರದಿಯಲ್ಲಿ ಏನಿದೆ?

Pinterest LinkedIn Tumblr

ceನವದೆಹಲಿ(ಅ. 17): ಕರ್ನಾಟಕದ ಕಾವೇರಿ ಕಷ್ಟಕ್ಕೆ ಕೇಂದ್ರದ ಅಧ್ಯಯನ ತಂಡ ತಕ್ಕಮಟ್ಟಿಗೆ ಸ್ಪಂದಿಸಿದೆ. ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಕೊಳ್ಳದ ಭಾಗದಲ್ಲಿನ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ಕೇಂದ್ರ ಅಧ್ಯಯನ ತಂಡವು ತನ್ನ ವರದಿಯನ್ನು ಸುಪ್ರೀಂಕೋರ್ಟ್’ಗೆ ಇಂದು ಸಲ್ಲಿಸಿದೆ. ತಮಿಳುನಾಡಿಗಿಂತ ಕರ್ನಾಟಕದ ಭಾಗದಲ್ಲಿ ಹೆಚ್ಚು ಸಂಕಷ್ಟವಿದೆ ಎಂಬುದನ್ನು ಈ ವರದಿ ಎತ್ತಿತೋರಿಸಿದೆ.
ಕರ್ನಾಟಕದ ಬಗ್ಗೆ ತಜ್ಞರ ತಂಡದ ವರದಿಯಲ್ಲೇನಿದೆ?
* ಕರ್ನಾಟಕದಲ್ಲಿ ಈ ವರ್ಷ ಶೇ. 51ರಷ್ಟು ಕಡಿಮೆ ಮಳೆಯಾಗಿದೆ.
* ಕಾವೇರಿ ಕೊಳ್ಳದಲ್ಲಿ 25 ವರ್ಷಗಳಲ್ಲೇ ಅತಿ ಕಡಿಮೆ ಮಳೆಯಾಗಿದೆ
* ಕಾವೇರಿಯ 4 ಜಲಾಶಯಗಳಲ್ಲಿ 19 ವರ್ಷಗಳಲ್ಲೇ ಅತ್ಯಂತ ಕಡಿಮೆ ಒಳಹರಿವು ಇದೆ
* 1436 ಕೆರೆಗಳ ಪೈಕಿ ಶೇ.53ರಷ್ಟು ಕೆರೆಗಳಲ್ಲಿ ನೀರೇ ಇಲ್ಲ
* ಶೇ. 39ರಷ್ಟು ಕೆರೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರಿನ ಸಂಗ್ರಹವಿದೆ
* ಕಾವೇರಿ ಕೊಳ್ಳ ಪ್ರದೇಶದ ಅಂತರ್ಜಲ ಪ್ರಮಾಣವೂ ಅಪಾಯಕಾರಿ ಸ್ಥಿತಿಯಲ್ಲಿದೆ
* ಕಾವೇರಿ ಭಾಗದ 48 ತಾಲೂಕುಗಳಲ್ಲಿ 42 ತಾಲೂಕುಗಳು ಬರಪೀಡಿತ ಪ್ರದೇಶಗಳು
* ಮಳೆ ಸರಿಯಾಗಿರದ ಕಾರಣ ಮಂಡ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆದಿವೆ.
ತಮಿಳುನಾಡಿನ ಬಗ್ಗೆ ತಜ್ಞರ ತಂಡದ ವರದಿಯಲ್ಲೇನಿದೆ?
* ಮೆಟ್ಟೂರಿನಲ್ಲಿ 31 ಟಿಎಂಸಿಗಿಂತ ಹೆಚ್ಚು ನೀರಿನ ಲೈವ್ ಸ್ಟೋರೇಜ್ ಇದೆ.
* ಈಶಾನ್ಯ ಮುಂಗಾರು ಬಾಕಿ ಇದ್ದು, ಅದು ಸರಿಯಾಗಿ ಆದರೆ 70 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹವಾಗಲಿದೆ.
* 2017ರವರೆಗೆ ತಮಿಳುನಾಡಿಗೆ ಬೇಕಾದ ನೀರು 163 ಟಿಎಂಸಿ; ನೀರು ಬರುವ ಸಾಧ್ಯತೆ ಇರುವುದು 148 ಟಿಎಂಸಿ

Comments are closed.