ಚೆನ್ನೈ: ಕಾವೇರಿ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನ ತಿರುಚ್ಚಿ ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ರೈತ ಸಂಘಟನೆಗಳು ರೈಲು ಸಂಚಾರಕ್ಕೆ ತಡೆಯೊಡ್ಡಿ ’48 ಗಂಟೆಗಳ ಕಾಲ ರೈಲು ರೋಖೋ’ ಪ್ರತಿಭಟನೆ ಆರಂಭಿಸಿವೆ.
ಈ ಪ್ರತಿಭಟನೆಗೆ ಡಿಎಂಕೆ ಸೇರಿದಂತೆ ತಮಿಳುನಾಡಿನ ವಿರೋಧಪಕ್ಷಗಳು ಬೆಂಬಲ ನೀಡಿವೆ.
ಇಲ್ಲಿನ ಶ್ರೀರಂಗಂ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನಾಕಾರರು ರೈಲಿಗೆ ತಡೆಯೊಡ್ಡಲು ಯತ್ನಿಸುತ್ತಿದ್ದ ವೇಳೆ ಮಾಜಿ ಸಚಿವ ಕೆ.ಎನ್. ನೆಹರು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆದಾಗ್ಯೂ, ಪ್ರತಿಭಟನೆ ನಡೆಯುತ್ತಿದ್ದರೂ ರೈಲ್ವೆ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯುಂಟಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.