ಪ್ರಮುಖ ವರದಿಗಳು

ಕಾವೇರಿ ವಿವಾದ ಪರಿಹಾರ ಮಾಡುವ ಕುರಿತು ರಮ್ಯಾ ಹೇಳಿದ್ದೇನು…?

Pinterest LinkedIn Tumblr

ramya

ತಲಕಾವೇರಿ: : ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯಬೇಕಿದ್ದರೆ ಮೂಲ ಒಪ್ಪಂದದಲ್ಲಿಯೆ ಬದಲಾವಣೆ ಆಗಬೇಕು, ಅದಕ್ಕಾಗಿ ಎರಡು ರಾಜ್ಯಗಳು ಮಾತುಕತೆ ನಡೆಸಬೇಕೆಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.

ತಲಕಾವೇರಿ ತೀರ್ಥೊದ್ಬವ ವೀಕ್ಷಣೆಗೆ ಆಗಮಿಸಿದ್ದ ರಮ್ಯಾ, ಸುಪ್ರೀಂ ಕೋರ್ಟ್ ತೀರ್ಪು ನೀಡುವಾಗ ಮೂಲ ಒಪ್ಪಂದವನ್ನು ಆಧಾರವಾಗಿಟ್ಟುಕೊಳ್ಳುವುದರಿಂದ ಮೂಲ ಒಪ್ಪಂದದಲ್ಲಿಯೇ ತಿದ್ದುಪಡಿ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮುಖಾಮುಖಿ ಕೂರಿಸಿ ಮಾತುಕತೆ ನಡೆಸುವ ಕೆಲಸ ಮಾಡಬೇಕು ಎಂದು ರಮ್ಯಾ ಹೇಳಿದ್ದಾರೆ.

ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಿಕೊಂಡು ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಎಲ್ಲರೂ ನಿಭಾಯಿಸಬೇಕೆಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.

Comments are closed.