ರಾಷ್ಟ್ರೀಯ

ಶೀಘ್ರವೇ 11 ಸಂಖ್ಯೆಯ ಮೊಬೈಲ್ ನಂಬರ್

Pinterest LinkedIn Tumblr

social_icons_6_on_mobile_smartphone_0ನವದೆಹಲಿ: ಶೀಘ್ರದಲ್ಲೇ ದೇಶೀಯ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ 10 ಸಂಖ್ಯೆಗಳ ಬದಲಿಗೆ 11 ಸಂಖ್ಯೆಗಳ ಮೊಬೈಲ್ ನಂಬರ್‍ಗಳನ್ನು ನೀಡಲಿವೆ.

2003ರಲ್ಲಿ ದೂರಸಂಪರ್ಕ ಇಲಾಖೆ 30 ವರ್ಷಗಳ ಅವಧಿಯ ಯೋಜನೆಯನ್ನು ಸಿದ್ಧಪಡಿಸಿತ್ತು. ಆದರೆ ದೇಶದಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ(ಟ್ರಾಯ್) ಟೆಲಿಕಾಂ ಕಂಪೆನಿಗಳು ಈ ನೀತಿಯನ್ನು ಮರು ಪರಿಶೀಲಿಸಿ 11 ಸಂಖ್ಯೆಗಳನ್ನು ಆರಂಭಿಸುವಂತೆ ಮನವಿ ಮಾಡಿದೆ

ಶೀಘ್ರದಲ್ಲೇ ಟ್ರಾಯ್ 11 ಸಂಖ್ಯೆಯ ಮೊಬೈಲ್ ನಂಬರ್‍ನ್ನು ಅನುಷ್ಠಾನಕ್ಕೆ ತರಲಿದೆ ಎಂದು ಝೀ ನ್ಯೂಸ್ ವರದಿ ಮಾಡಿದೆ.

6 ತಿಂಗಳಲ್ಲಿ ಹೊಸದಾಗಿ ಸೇರ್ಪಡೆಯಾಗುವ ಗ್ರಾಹಕರ ಸಂಖ್ಯೆಯನ್ನು ನೋಡಿಕೊಂಡು ಟೆಲಿಕಾಂ ಕಂಪೆನಿಗಳಿಗೆ ಹೊಸ ಸೀರಿಸ್‍ನ ನಂಬರ್ ಹಂಚಿಕೆಯಾಗುತ್ತದೆ. ಚೀನಾದಲ್ಲಿ ಈಗಾಗಲೇ 11 ಸಂಖ್ಯೆಯ ಮೊಬೈಲ್ ನಂಬರನ್ನು ಟೆಲಿಕಾಂ ಕಂಪೆನಿಗಳು ನೀಡುತ್ತಿವೆ.

ಜಿಯೋ ದಾಖಲೆ: ಕಡಿಮೆ ಹಣದಲ್ಲಿ ಅತಿ ವೇಗದ ಇಂಟರ್‍ನೆಟ್ ಸೇವೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಯೋ ತನ್ನ ‘ವೆಲ್‍ಕಮ್ ಆಫರ್’ಗೆ 26 ದಿನಗಳಲ್ಲಿ 1 ಕೋಟಿ 60 ಲಕ್ಷ ಗ್ರಾಹಕರನ್ನು ಸಂಪಾದಿಸಿತ್ತು. 16 ಮಿಲಿಯನ್‍ಗೂ ಹೆಚ್ಚು ಚಂದಾದಾರನ್ನು ಹೊಂದುವ ಮೂಲಕ ತಾನು ವಿಶ್ವದಾಖಲೆ ಸೃಷ್ಟಿಸಿರುವುದಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ)ಇಂದು ಘೋಷಿಸಿತ್ತು. ಈ ಪ್ರಗತಿಯನ್ನು ವಿಶ್ವದಲ್ಲೇ ಯಾವುದೇ ಟೆಲಿಕಾಂ ಆಪರೇಟರ್ ಅಥವಾ ಫೇಸ್‍ಬುಕ್, ವಾಟ್ಸಪ್ ಮತ್ತು ಸ್ಕೈಪ್‍ನಂತಹ ಯಾವುದೇ ಇತರ ಕಂಪೆನಿಗಳು ಸಾಧಿಸಿಲ್ಲ ಎಂದು ಜಿಯೋ ಹೇಳಿಕೊಂಡಿದೆ.

Comments are closed.