ಕರ್ನಾಟಕ

ಧ್ವಜ ಕಟ್ಟುವ ವಿಚಾರಕ್ಕೆ ಹೊತ್ತಿ ಉರಿದ ಬೆಳಗಾವಿ

Pinterest LinkedIn Tumblr

beಬೆಳಗಾವಿ: ಜಿಲ್ಲೆಯಲ್ಲಿ ಧ್ವಜ ಸ್ತಂಭ ನಿರ್ಮಾಣದ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭಸಿದೆ. ಧ್ವಜ ಕಟ್ಟುವ ವಿಚಾರದಲ್ಲಿ ರಾಜಕಾರಣಿಗಳು ರಾಜಕೀಯ ಮಾಡಿದ್ರಿಂದ ಬೆಳಗಾವಿ ನಗರ ರಾತ್ರಿಯಿಡೀ ಹೊತ್ತಿ ಉರಿದಿದೆ.
blg-1ಪಾಲಿಕೆ ಸದಸ್ಯ ಮುಜಾಮಿಲ್ ಡೋಣಿ ಹಾಗೂ ನದೀಮ್ ಶೇಖ್ ಗುಂಪಿನ ಮಧ್ಯೆ ಧ್ವಜ ಕಟ್ಟುವ ವಿಚಾರದಲ್ಲಿ ಗಲಾಟೆ ನಡೆದಿದೆ. ಗಲಾಟೆ ವೇಳೆ ಒಂದು ಗುಂಪಿನವರು ಮೊದಲು ಕಲ್ಲು ತೂರಾಟ ಮಾಡಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ಮತ್ತೊಂದು ಗುಂಪಿನವರು ಹಲ್ಲೆ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ 4 ಕಾರು, 10 ಬೈಕ್, 2 ವ್ಯಾನ್‍ಗಳಿಗೆ ರಾತ್ರಿ ಬೆಂಕಿ ಹಚ್ಚಿದ್ದಾರೆ. ಬೆಳಗಾವಿಯ ಸರದಾರ್ ಸರ್ಕಲ್, ನಾನಾ ಪಾಟೇಕರ್ ಗಲ್ಲಿ, ಕಡಕ ಗಲ್ಲಿ, ಕಸಾಯಿ ಗಲ್ಲಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

blg-2ಘಟನೆಯಿಂದಾಗಿ ಅನೇಕ ಮನೆಗಳ ಗಾಜು ಕಿಡಕಿಗಳು ಪುಡಿಪುಡಿಯಾಗಿವೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಕೃಷ್ಣ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರಾದ ಮುಜಮಲ್ ಡೋಣಿ, ಮತೀನ್ ಶೇಖ್ ಸೇರಿ 20ಕ್ಕೂ ಹೆಚ್ಚು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಪಾಲಿಕೆ ಸದಸ್ಯ ನದೀಂ ಶೇಖ್ ನಾಪತ್ತೆಯಾಗಿದ್ದು, 4 ಕೆಎಸ್‍ಆರ್‍ಪಿ ತುಕಡಿಯನ್ನ ಭದ್ರತೆಗೆ ನಿಯೋಜಿಸಲಾಗಿದೆ. ಸದ್ಯ ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ.

Comments are closed.