ರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್: ಸರ್ಕಾರಕ್ಕೆ ಸೇನೆಯಿಂದ ದಾಖಲೆಗಳ ಹಸ್ತಾಂತರ

Pinterest LinkedIn Tumblr

armyನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಇರುವ ಮಹತ್ವದ ವಿಡಿಯೊ ದಾಖಲೆಗಳನ್ನು ಸೇನಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿದೆಯೇ? ಇಲ್ಲವೇ? ಒಂದು ವೇಳೆ ದಾಳಿ ನಡೆಸಿದ್ದರೆ ಅದಕ್ಕೆ ಸಾಕ್ಷ್ಯವನ್ನು ಒದಗಿಸಿ ಎಂದು ಕಾಂಗ್ರೆಸ್, ಆಮ್ ಆದ್ಮಿಪಕ್ಷ ಒತ್ತಾಯಿಸುತ್ತಿರುವುದರಿಂದ ಸೇನೆ ಈ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಒದಗಿಸಲು ತೀರ್ಮಾನಿಸಿತ್ತು.

ನಿರ್ದಿಷ್ಟ ದಾಳಿ ನಡೆದಿರುವ ಬಗ್ಗೆ ಭಾರತದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಅವರೇ ಹೇಳಿಕೆ ನೀಡಿದ್ದಾರೆ. ದೇಶದ ರಕ್ಷಣಾ ಸಚಿವರಾಗಲೀ ಅಥವಾ ಪ್ರಧಾನಿಯಾಗಲೀ, ಗೃಹ ಸಚಿವರಾಗಲೀ ನಿರ್ದಿಷ್ಟ ದಾಳಿ ಬಗ್ಗೆ ಮಾಧ್ಯಮದವರಿಗೆ ಹೇಳಿಕೆ ನೀಡಿಲ್ಲ. ಡಿಜಿಎಂಒ ಅವರೇ ಮಾಧ್ಯಮದವರಿಗೆ ಈ ಮಾಹಿತಿ ನೀಡಿದ್ದರು. ಅದು ಸೇನೆಯ ರೀತಿ, ಸೇನೆ ಮಾಡಿದ್ದು ಸರಿ ಇದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಈ ಸಾಕ್ಷ್ಯಾಧಾರಗಳನ್ನು ಬಹಿರಂಗ ಪಡಿಸಲಾಗುವುದೇ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಜಿಜು ಸರ್ಕಾರದ ಮೇಲೆ ನಂಬಿಕೆ ಇರಲಿ, ಇನ್ನುಳಿದದ್ದನ್ನು ಸೇನೆಗೆ ಬಿಟ್ಟು ಬಿಡಿ ಎಂದಿದ್ದಾರೆ.

Comments are closed.